• May 16, 2022

ಅಕಾಲಿಕ ಮೃತ್ಯು ತಡೆಯುವ ಕೇಂದ್ರಕ್ಕೆ ಪುನೀತ್ ಹೆಸರು

ಅಕಾಲಿಕ ಮೃತ್ಯು ತಡೆಯುವ ಕೇಂದ್ರಕ್ಕೆ ಪುನೀತ್ ಹೆಸರು

ಅಕಾಲಿಕ ಮೃತ್ಯು ತಡೆಯುವ ಸಲುವಾಗಿ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ದೀರ್ಘಾಯುಷ್ಯ ಕೇಂದ್ರವನ್ನು ಇಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಸಚಿವ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಐಟಿಬಿಟಿ ಇಲಾಖೆಯ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ಬೆಂಬಲದ ಮೂಲಕ ನವೋದ್ಯಮಗಳು ಅಭಿವೃದ್ಧಿ ಪಡಿಸಿರುವ 6 ಜೀವವಿಜ್ಞಾನ ಸಾಧನೆಗಳನ್ನು ಉದ್ಘಾಟಿಸಿ ಮಾತನಾಡಿದ್ದಾರೆ.

ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಮಲ, ಕಫ, ಮೂತ್ರ ಮುಂತಾದವುಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದೆ. ಇದಕ್ಕಾಗಿ ದೇಶದ ಮೊಟ್ಟ ಮೊದಲ ಬಯೋ ಬ್ಯಾಂಕಿಂಗ್ ಹಾಗೂ ಸಂಗ್ರಹ ಮಾದರಿ ಕೋಶವನ್ನು ಕೂಡಾ ಸ್ಥಾಪನೆ ಮಾಡಲಾಗುವುದು. ಇದರಿಂದ ರೋಗ ನಿಧಾನ ಶಾಸ್ತ್ರ ವೈಜ್ಞಾನಿಕವಾಗಿ ನಡೆಯಲಿದೆ ಎಂದು ತಿಳಿಸಿದರು.

ಪುನೀತ್ ಅವರು ಅಕಾಲಿಕ ಮರಣ ಹೊಂದಿದ ಕಾರಣ ದೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ಅವರ ಹೆಸರನ್ನು ಇಡಲು ಸಚಿವರು ಮುಂದಾಗಿದ್ದಾರೆ.