• July 16, 2022

ತೆರೆಕಾಣುತ್ತಿದೆ ರಾಜ್ ಕುಟುಂಬದ ಮತ್ತೊಂದು ಕುಡಿಯ ಹೊಸ ಚಿತ್ರ.

ತೆರೆಕಾಣುತ್ತಿದೆ ರಾಜ್ ಕುಟುಂಬದ ಮತ್ತೊಂದು ಕುಡಿಯ ಹೊಸ ಚಿತ್ರ.

ವರನಟ ಡಾ| ರಾಜಕುಮಾರ್ ಅವರ ಹಿಂದೆಯೇ ಅವರ ಕುಟುಂಬದ ಕುಡಿಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಈ ಕುಟುಂಬದ ಕಲಾವಿದರು ನೀಡಿರುವ ಕೊಡುಗೆ ಅಪಾರ. ಇದೀಗ ರಾಜ್ ಕುಟುಂಬದಿಂದ ಮತ್ತೊಬ್ಬ ನಟ ಹೊರಹೊಮ್ಮುತ್ತಿದ್ದಾರೆ. ಅವರೇ ಧೀರನ್ ರಾಮ್ ಕುಮಾರ್. ರಾಜಕುಮಾರ್ ಅವರ ಮೊಮ್ಮಗ, ಪ್ರಖ್ಯಾತ ನಟ ರಾಮಕುಮಾರ್ ಹಾಗು ಪೂರ್ಣಿಮಾ ದಂಪತಿಯ ಮಗನಾಗಿರುವ ಇವರ ಮೊದಲ ಸಿನಿಮಾ ‘ಶಿವ 143’ ಇದೀಗ ತೆರೆಕಾಣಲು ಸಿದ್ಧವಾಗಿದೆ.

ಅನಿಲ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ತೆಲುಗಿನ ‘RX 100’ ಸಿನಿಮಾದ ರಿಮೇಕ್ ಎನ್ನಲಾಗುತ್ತಿದ್ದೂ, ಚಿತ್ರದ ಟ್ರೈಲರ್ ಹಾಗು ಪೋಸ್ಟರ್ ಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಮೊದಲ ಬಾರಿ ನಾಯಕನಾಗಿ ನಟಿಸುತ್ತಿರುವ ಧೀರನ್ ರಾಮಕುಮಾರ್ ಅವರಿಗೆ ಮನ್ವಿತಾ ಕಾಮತ್ ಅವರು ಜೋಡಿಯಾಗಿರಲಿದ್ದು, ಜಯಣ್ಣ-ಭೋಗೇಂದ್ರ ಅವರ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ತುಂಬಿದ್ದಾರೆ. ಇದೇ ಆಗಸ್ಟ್ 26ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಗುತ್ತಿದ್ದು, ಧೀರನ್ ರಾಮಕುಮಾರ್ ಅವರಿಗೆ ಈ ಚಿತ್ರದಿಂದ ಒಂದೊಳ್ಳೆ ಆರಂಭ ಸಿಗುವ ನಿರೀಕ್ಷೆ ಇದೆ.