• January 3, 2022

ಸ್ಯಾಂಡಲ್‌ವುಡ್ ಗೂ ತಟ್ಟಲಿದ್ಯಾ ಒಮಿಕ್ರಾನ್ ಬಿಸಿ

ಸ್ಯಾಂಡಲ್‌ವುಡ್ ಗೂ ತಟ್ಟಲಿದ್ಯಾ ಒಮಿಕ್ರಾನ್ ಬಿಸಿ

ಕೊರೊನಾ …ಕೊರೊನಾ…ಅಂತ ಕಳೆದ ಎರಡು ವರ್ಷದಿಂದ ಇಡೀ‌‌ ದೇಶವೇ ನಲುಗಿ ಹೋಗಿದೆ…ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರವೂ ಕೂಡ ಕೊರೋನಾ ಎಫೆಕ್ಟ್ ನಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದೆ…ಇನ್ನೋನು ಎಲ್ಲಾ ಮುಗಿತು ಹೊಸ ವರ್ಷ ಹೊಸ ರೀತಿ ಆರಂಭವಾಗುತ್ತೆ ಎಂದ ತಯಾರಾಗಿದ್ದ ಸಿನಿಮಾಗಳನ್ನ ಬಿಡುಗಡೆ ಮಾಡಲು ದಿನಾಂಕ ನಿಗಧಿ ಮಾಡಿ ಸಿನಿಮಾತಂಡಗಳು ಪ್ರಚಾರ ಆರಂಭಿಸಿದ್ರೆ ಈಗ ಒಮಿಕ್ರಾ‌ನ್ ಬಂದು ಒಕ್ಕರಿಸಿದೆ..ಒಮಿಕ್ರಾನ್ ಕರಿ ನೆರಳು ಸಿನಿಮಾರಂಗದ ಮೇಲೆ ಬೀಳುವ ಸಾಧ್ಯತೆ ಬಹುತೇಕ ಪಕ್ಕಾ ಆಗಿದೆ…

ರಾಜ್ಯದಲ್ಲಿ ಒಮಿಕ್ರಾನ್ ನಿಂದ ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಜೋರಾಗಿದೆ…ಈಗ ಚಿತ್ರರಂಗದ ಮೇಲೆ ಮತ್ತೆ ಈ ಎಫೆಕ್ಟ್ ಆಗುತ್ತೆ ಎನ್ನುವ ಟಾಕ್ ಶುರುವಾಗಿದೆ…ಈಗಾಗಲೇ ಹಲವು ರಾಜ್ಯಗಳಲ್ಲಿ 50% ಥಿಯೇಟರ್ ಓಪನ್ ಗೆ ಮಾತ್ರ ಅವಕಾಶ ಎಂದು ಘೋಷಣೆ ಆಗಿದೆ…

50% ಚಿತ್ರಮಂದಿರ ಸೀಟು ಬರ್ತಿಗೆ ಅವಕಾಶ ಹಿನ್ನೆಲೆಯಲದಲಿ ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಆಗ್ತಿದೆ..ಈಗಾಗ್ಲೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ…ಜನವರಿ ಮತ್ತು ಫೆಬ್ರವರಿ ಯಲ್ಲಿ ಬರಬೇಕಿದ್ದ ಚಿತ್ರಗಳ ಬಿಡುಗಡೆ ದಿನಾಂಕ ಕೂಡ ಮುಂದೂಡೋ ಸಾಧ್ಯತೆ ಹೆಚ್ಚಾಗಿದ್ದು ಇದು ಚಿತ್ರರ.ಗದ ಮಂದಿಯ ಆಂತಕಕ್ಕೆ ಕಾರಣವಾಗಿದೆ…

ಜನವರಿ 14 ಕ್ಕೆ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆ ಆಗಬೇಕಿತ್ತು..ಜನವರಿ 7ಕ್ಕೆ ಆರ್ ಆರ್ ಆರ್ ರಿಲೀಸ್ ಆಗಬೇಕಿತ್ತು..ಒಮಿಕ್ರಾನ್ ಕೇಸ್ ಮತ್ತಷ್ಟು ಹೆಚ್ಷಾದ್ರೆ,ರಾಧೆ ಶ್ಯಾಮ್ ಚಿತ್ರ ರಿಲೀಸ್ ಡೇಟ್ ಕೂಡ ಮುಂದೆ ಹೋಗೋ ಸಾಧ್ಯತೆ ಇದೆ‌…

ಜೋಗಿ ಪ್ರೇಮ್ ನಿರ್ದೇಶನ ರಚಿತಾ ರಾಮ್ ನಟನೆಯ ಏಕ್ ಲವ್ ಯಾ ಸಿನಿಮಾ ಜನವರಿ ಕೊನೆಯಲ್ಲಿ ಬಿಡುಗಡೆಗೆ ಪ್ಲಾನ್ ನಡೆದಿದೆ. ಜನವರಿ ೪ರಂದು ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನ ಮೈಸೂರಿನಲ್ಲಿ ಪ್ಲಾನ್ ಮಾಡಿತ್ತು ತಂಡ ಆದ್ರೆ ಒಮಿಕ್ರಾನ್ ಕೇಸ್ ಹೆಚ್ಚಾಗುತ್ತಿದ್ದಂತೆ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನ ಕ್ಯಾನ್ಸಲ್ ಮಾಡಿದೆ ಸಿನಿಮಾತಂಡ…

ಇನ್ನು ಶರಣ್ ನಟನೆಯ ಅವತಾರ ಪುರುಷ, ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಮಾಕ್ಟೆಲ್ ಸಿನಿಮಾ ಫೆಬ್ರವರಿ ಮೊದಲ ವಾರ ಬರಲು ಸಿದ್ಧವಾಗಿವೆ.
ಫೆಬ್ರವರಿ 24 ಕ್ಕೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗಲಿದೆ.
ಮಾರ್ಚ್ ಮೊದಲ ವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರ ಜೇಮ್ಸ್‌ ಸಿನಿಮಾ‌ ರಿಲೀಸ್ ಗೆ ಪ್ಲಾನ್ ಆಗಿದೆ.ಇಷ್ಟೆಲ್ಲಾ ಪ್ಲಾನ್ ಗಳನ್ನ ಒಮಿಕ್ರಾನ್ ತಲೆಕೆಳಗೆ ಮಾಡುತ್ತಾ…ಮತ್ತದೆ ಸಂಕಷ್ಟದಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಳ್ಳುತ್ತಾ ಅನ್ನೋ‌ಚಿಂತೆಯಲ್ಲಿಯೇ ಇದ್ದಾರೆ ಸಿನಿಮಾಮಂದಿ…