• December 11, 2021

ನಾನು ತಲೆ ತಗ್ಗಿಸುವಂತೆ ಮಾಡಬೇಡ” ಜ್ಯೂ ಎನ್ ಟಿ ಆರ್ ಗೆ ತಾಯಿಯ ಸಲಹೆ

ನಾನು ತಲೆ ತಗ್ಗಿಸುವಂತೆ ಮಾಡಬೇಡ” ಜ್ಯೂ ಎನ್ ಟಿ ಆರ್ ಗೆ ತಾಯಿಯ ಸಲಹೆ

ಜ್ಯೂ ಎನ್ ಟಿ ಆರ್ ಅಭಿನಯದ ಆರ್ ಆರ್ ಆಎ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ…ಚಿತ್ರದ ಟ್ರೇಲರ್ ಟೀಸರ್ ಈಗಾಗಲೇ ಧೂಳೆಬ್ಬಿಸುತ್ತಿದ್ದು ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ..

ಇನ್ನು ಸಿನಿಮಾ ಕನ್ನಡದಲ್ಲಿಯೂ ರಿಲೀಸ್ ಆಗಲಿದ್ದು ..ಟಾಲಿವುಡ್ ಸ್ಟಾರ್ ಗಳು ತಾವೇ ಖುದ್ದು ತಮ್ಮ‌ಪಾತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ…ಜ್ಯೂ ಎನ್ ಟಿ ಆರ್ ಕೂಡ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದು ಈ ಹಿಂದೆಯೇ ತಾರಕ್ ಅಪ್ಪುಗಾಗಿ ಕನ್ನಡ ಹಾಡೊಂದನ್ನ ಹಾಡಿದ್ರು…ಕರ್ನಾಟಕಕ್ಕೂ ಎನ್ ಟಿ ಆರ್ ಗೂ ಅವಿನಾಭಾವ ಸಂಬಂಧವಿದ್ದು ಎನ್ ಟಿ ಆರ್ ತಾಯಿ ಕುಂದಾಪುರದವ್ರು…ಹಾಗಾಗಿ ಜ್ಯೂ ಎನ್ ಟಿ ಆರ್ ತಾಯಿ ಕನ್ನಡವನ್ನ ಚೆನ್ನಾಗಿಯೇ ಮಾತನಾಡುತ್ತಾರೆ…

ಆರ್ ಆರ್ ಆರ್ ಟ್ರೇಲರ್ ಗೆ ಕನ್ನಡದಲ್ಲಿ ಡಬ್ ಮಾಡಿರೋ ಜ್ಯೂ‌ಎನ್ ಟಿ ಆರ್ ಗೆ ಅವ್ರ ತಾಯಿ ಒಂದು ಕಿವಿ ಮಾತು ಹೇಳಿದ್ರಂತೆ..ಡಬ್ಬಿಂಗ್ ಮಾಡು ಖುಷಿ ಆದ್ರೆ ಜಾಗ್ರತೆಯಿಂದ ಇರು..ಅಲ್ಲಿ ನಮ್ಮವರು ಇದ್ದಾರೆ ನೀನು ತಪ್ಪು ಮಾಡಿದ್ರೆ ಗೊತ್ತಾಗುತ್ತದೆ.. ನಾನು ತಲೆ ತಗ್ಗಿಸುವಂತ ಕೆಲಸ ಮಾತ್ರ ಮಾಡಬೇಡ ಎಂದಿದ್ರೆ…ಅದೇ ಕಾರಣದಿಂದ ತಾರಕ್ ಸಾಕಷ್ಟು ಭಾರಿ ರಿಹರ್ಸಲ್ ಮಾಡಿ ಡಬ್ಬಿಂಗ್ ಮಾಡಿದ್ದಾರೆ….