• April 9, 2022

ಕಿರುತೆರೆಯ ಬಾರ್ಬಿ ಡಾಲ್ ಹೊಸ ಪ್ರಯೋಗ

ಕಿರುತೆರೆಯ ಬಾರ್ಬಿ ಡಾಲ್ ಹೊಸ ಪ್ರಯೋಗ

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕರುನಾಡಿನಾದ್ಯಂತ ಮನೆ ಮನೆಮಾತಾದ ನಿವೇದಿತಾ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋವಿನಲ್ಲಿ ತಮ್ಮ ಪತಿ ಚಂದನ್ ಶೆಟ್ಟಿ ಅವರೊಂದಿಗೆ ಭಾಗವಹಿಸಿದ್ದರು. ಇದೀಗ ನಿವೇದಿತಾ ಗೌಡ ಮತ್ತೆ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಿದ್ದು ಗಿಚ್ಚಿ ಗಿಲಿಗಿಲಿ ಎನ್ನುವ ಕಾಮಿಡಿ ಶೋ ನಲ್ಲಿ ಭಾಗವಹಿಸಲಿದ್ದಾರೆ. ಅಂದ ಹಾಗೇ ಕಿರುತೆರೆಯಲ್ಲಿ ಇದು ಅವರ ಮೂರನೇ ಶೋ ಆಗಿದೆ.

“ಜನರಿಂದ ದೊರಕಿದ ಪ್ರೀತಿ ಟಿವಿಯ ಮೇಲೆ ಪ್ರೀತಿ ಬರುವಂತೆ ಮಾಡಿದೆ. ಟಿವಿ ಎಲ್ಲಾ ವಯಸ್ಸಿನ ಜನರಿಗೆ ನನ್ನನ್ನು ತಲುಪುವಂತೆ ಮಾಡಿದೆ. ನಾನು ಮಾಡಿದ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆದಿವೆ” ಎಂದಿದ್ದಾರೆ ನಿವೇದಿತಾ.

ಗಿಚ್ಚಿಗಿಲಿಗಿಲಿ ಶೋ ಕುರಿತು ಮಾತನಾಡಿರುವ ನಿವೇದಿತಾ ” ಇದು ಮನರಂಜನಾತ್ಮಕ ಕಾರ್ಯಕ್ರಮವಾಗಿದ್ದು ಎಲ್ಲಾ ಅಂಶಗಳನ್ನು ಒಳಗೊಂಡಿದೆ.ಇದರ ಶೀರ್ಷಿಕೆಯೇ ಮೋಡಿ ಮಾಡುತ್ತಿದೆ. ಆಸಕ್ತಿಕರವಾದ ಥೀಮ್ ಆಧಾರದಲ್ಲಿ ನಾವು ಆಕ್ಟ್ ಮಾಡುತ್ತೇವೆ. ನನಗೆ ಜೋಡಿಯಾಗಿ ಬೇರೆ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ಅದನ್ನು ಚಾನೆಲ್ ಶೀಘ್ರದಲ್ಲೇ ಬಹಿರಂಗ ಪಡಿಸಲಿದೆ.” ಎಂದಿದ್ದಾರೆ. ನಿವೇದಿತಾ ತನ್ನ ಓದು ಮುಗಿಸಿದ್ದು ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ. ನಟಿಯಾಗುವ ಇಚ್ಛೆ ಹೊಂದಿದ್ದಾರೆ.

“ಬಿಗ್ ಬಾಸ್ ಶೋ ನಂತರ ಚಂದನವನದಿಂದ ಹಲವು ಆಫರ್ಸ್ ಗಳು ಬಂದವು. ಆದರೆ ನನಗೆ ಓದನ್ನು ಪೂರ್ಣಗೊಳಿಸಲು ಬಯಸಿದ್ದರಿಂದ ಆಫರ್ಸ್ ತಿರಸ್ಕರಿಸಿದೆ. ಏರ್ ಪೋರ್ಟ್ ನಲ್ಲಿ ಟರ್ಮಿನಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೆ. ರಾಜಾ ರಾಣಿ ಶೋ ನಲ್ಲಿದ್ದಾಗ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ. ನಟನೆಯಲ್ಲಿ ಪ್ರಯತ್ನ ಮಾಡಲು ತೀರ್ಮಾನಿಸಿದೆ. ನನಗೆ ವೆಬ್ ಸಿರೀಸ್ ನಲ್ಲಿ ನಟಿಸಲು ಆಫರ್ ಬಂತು. ಚುಕ್ಕಿ ಎಂಬ ಟೈಟಲ್ ಹೊಂದಿರುವ ಈ ವೆಬ್ ಸಿರೀಸ್ ನಲ್ಲಿ ನಾನು ಕಾಲೇಜು ಸ್ಟುಡೆಂಟ್ ಆಗಿ ನಟಿಸುತ್ತಿದ್ದೇನೆ. ನಾನು ಟಿವಿಯಲ್ಲಿ ಕ್ಯಾಮೆರಾ ಎದುರಿಸಿದ್ದರೂ ಇತರ ರೀತಿಯ ಮನರಂಜನೆಗೆ ಬಂದಾಗ ಇದು ಸ್ವಲ್ಪ ವಿಭಿನ್ನವಾಗಿದೆ” ಎನ್ನುತ್ತಾರೆ ನಿವೇದಿತಾ.