- May 9, 2022
ಕಿರುತೆರೆಯ ಬಾರ್ಬಿ ಡಾಲ್ ಗಿದೆ ದೊಡ್ಡ ಕನಸು


ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸ್ಪರ್ಧಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಇಂದು ಕರುನಾಡಿನಾದ್ಯಂತ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ನ ನಂತರ ರಾಜ ರಾಣಿ ರಿಯಾಲಿಟಿ ಶೋವಿನಲ್ಲಿ ಪತಿ ಚಂದನ್ ಶೆಟ್ಟಿ ಅವರೊಂದಿಗೆ ಭಾಗವಹಿಸಿದ್ದ ನಿವೇದಿತಾ ಸದ್ಯ ಗಿಚ್ಚಿ ಗಿಲಿಗಿಲಿ ಎನ್ನುವ ಕಾಮಿಡಿ ಶೋ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ.




ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ವೆಬ್ ಸಿರೀಸ್ ನಲ್ಲಿ ನಟಿಸುತ್ತಿರುವ ವಿಚಾರವನ್ನು ಇತ್ತೀಚೆಗಷ್ಟೇ ಬಹಿರಂಗಗೊಳಿಸಿದ್ದರು. ಇದೀಗ ಮಗದೊಂದು ಸಿಹಿ ಸುದ್ದಿ ನಿವೇದಿತಾ ಗೌಡ ಹಂಚಿಕೊಂಡಿದ್ದು ಅದರಲ್ಲಿ ಮಿಸೆಸ್ ಇಂಡಿಯಾ ಆಗುವ ಕನಸನ್ನು ಬಹಿರಂಗಗೊಳಿಸಿದ್ದಾರೆ.




ಹೌದು, ನಿವೇದಿತಾ ಗೌಡ ಅವರು ಮಿಸೆಸ್ ಇಂಡಿಯಾ ಆಗಬೇಕು ಎಂಬ ಕನಸು ಕಂಡಿದ್ದು, ಅದಕ್ಕಾಗಿ ಈಗಾಗಲೇ ತರಬೇತಿಯನ್ನು ಕೂಡಾ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಇನ್ನು ಮುಖ್ಯವಾಗಿ ಕ್ಯಾಟ್ ವಾಕ್ ಮಾಡುವುದು ಹೇಗೆ ಎಂಬುದನ್ನು ತರಬೇತಿ ಮೂಲಕ
ಕಲಿಯುತ್ತಿದ್ದು ಕ್ಯಾಟ್ ವಾಕ್ ಮಾಡುತ್ತಿರುವ ವಿಡಿಯೋದ ತುಣುಕುವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. ಒಟ್ಟಿನಲ್ಲಿ ಕಿರುತೆರೆಯ ಬಾರ್ಬಿ ಡಾಲ್ ಮುಂದಿನ ದಿನಗಳಲ್ಲಿ ಮಿಸೆಸ್ ಇಂಡಿಯಾ ಆಗಿ ಹೊರಹೊಮ್ಮಿದರೆ ಆಶ್ಚರ್ಯವೇನೂ ಇಲ್ಲ.






