• April 8, 2022

ಮೊದಲ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡ ನೀನಾಸಂ ಸತೀಶ್

ಮೊದಲ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡ ನೀನಾಸಂ ಸತೀಶ್

ನೀನಾಸಂ ಸತೀಶ್ ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರು. ನೀನಾಸಂ ನಲ್ಲಿ ನಾಟಕ ತರಬೇತಿ ಪಡೆದ ನಂತರ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ ಸತೀಶ್ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಸಿನಿಮಾರಂಗ ಹಾಗೂ ಕಿರುತೆರೆ ಪ್ರವೇಶಕ್ಕಾಗಿ ಫೋಟೋ ಶೂಟ್ ಮಾಡಿಸಿ ಅಂತ ಗೆಳೆಯರು ಕೊಟ್ಟ ಸಲಹೆಯಂತೆ ಸಿನಿಮಾ ಫೋಟೋ ಜರ್ನಲಿಸ್ಟ್ ಡಿ.ಸಿ ನಾಗೇಶ್ ಅವರು ಮೊದಲ ಬಾರಿಗೆ ಸತೀಶ್ ಅವರ ಫೋಟೋ ಶೂಟ್ ಮಾಡಿ ವಿಧವಿಧದ ಛಾಯಾ ಚಿತ್ರಗಳನ್ನು ಸೆರೆ ಹಿಡಿದುಕೊಟ್ಟಿದ್ದರು. ಇದಕ್ಕಾಗಿ ಸತೀಶ್ ಹಲವು ಕಾಸ್ಟ್ಯೂಮ್ ಗಳನ್ನು ಕೊಂಡುಕೊಂಡಿದ್ದರು.

ಮನಸಾರೆ,ಪಂಚರಂಗಿ,ಪರಮಾತ್ಮ, ಲೈಫು ಇಷ್ಟೇನೆ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನೀನಾಸಂ ಸತೀಶ್ ಮೊದಲ ಬಾರಿ ನಾಯಕರಾಗಿ ನಟಿಸಿದ್ದು ಲೂಸಿಯಾ ಸಿನಿಮಾದಲ್ಲಿ. ಈ ಚಿತ್ರ ಅವರಿಗೆ ಸಕ್ಸಸ್ ನೀಡಿದ್ದು ಮಾತ್ರವಲ್ಲದೇ ಇದರಿಂದಾಗಿ ಸತೀಶ್ ಅವರಿಗೆ ಇನ್ನಷ್ಟು ಅವಕಾಶಗಳು ಕೂಡಾ ದೊರಕಿತು. ಮಾತ್ರವಲ್ಲ ಅವರ ವೃತ್ತಿ ಬದುಕಿಗೆ ಇದು ತಿರುವು ನೀಡಿತು. ಜೊತೆಗೆ ಹಲವು ಪುರಸ್ಕಾರಗಳು ಸಿಕ್ಕವು.

ಇದೀಗ ಮೊದಲು ಮಾಡಿಸಿರುವಂತಹ ಫೋಟೋಶೂಟ್ ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸತೀಶ್ ಅಭಿಮಾನಿಗಳಿಗೆ ಹಾಗೂ ಡಿ.ಸಿ. ನಾಗೇಶ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.