• May 26, 2022

ಮದುವೆ ಪೋಟೋಗಳ ಮೂಲಕ ಸದ್ದು ಮಾಡಿದ ನಿನಾದ್ ಹರಿತ್ಸ

ಮದುವೆ ಪೋಟೋಗಳ ಮೂಲಕ ಸದ್ದು ಮಾಡಿದ ನಿನಾದ್ ಹರಿತ್ಸ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳತಿ ರಮ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯ ನಂತರ ಈ ಜೋಡಿ ಬಹಳ ಸುಂದರವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಮುದ್ದು ಜೋಡಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಗುರು ಹಿರಿಯರ, ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಿನಾದ್ ಹಾಗೂ ರಮ್ಯಾ ಸದ್ದಿಲ್ಲದೆಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ ಮೇ 20ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದೀಗ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ.

ನಿನಾದ್ ಅವರು ಹಂಚಿಕೊಂಡಿರುವ ಪೋಟೋಶೂಟ್‌ ನಲ್ಲಿ ನಿನಾದ್ ಅವರು ಬಿಳಿ ಬಣ್ಣದ ಶೆರ್ವಾಜಿಯಲ್ಲಿ ಮಿಂಚಿದರೆ, ಮಡದಿ ರಮ್ಯಾ ತಿಳಿನೀಲಿ ಬಣ್ಣದ ಸೀರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಮದುವೆಯ ನಂತರ ಈ ಜೋಡಿ ಮಾಡಿಸಿಕೊಂಡಿರುವ ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನಾದ್ ಅವರು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರೆ ಅವರ ಪತ್ನಿ ರಮ್ಯಾ ಸಿಎ ಆಗಿದ್ದಾರೆ. ಒಟ್ಟಿನಲ್ಲಿ ನವಜೀವನ ಶುರು ಮಾಡಿರುವ ಈ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.