• December 16, 2021

ರೇವತಿ ನಿಖಿಲ್ ಜೊತೆ ಮೊದಲ‌ ರೀಲ್ಸ್ ಮಾಡಿದ ರೈಡರ್ !

ರೇವತಿ ನಿಖಿಲ್ ಜೊತೆ ಮೊದಲ‌ ರೀಲ್ಸ್ ಮಾಡಿದ ರೈಡರ್ !

ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾ‌ತೆರೆಗೆ ಬರಲು ಸಿದ್ದವಾಗಿದೆ…ಇದೇ ತಿಂಗಳು 24ರಂದು ಚಿತ್ರ ರಿಲೀಸ್ ಆಗ್ತಿದ್ದು…ಚಿತ್ರವನ್ನ ವಿಜಯ್ ಕುಮಾರ್ ಕೊಂಡ ನಿರ್ದೇಶನ‌ ಮಾಡಿದ್ದು ಶರತ್ ಚಕ್ರವರ್ತಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ…

ಕಾಶ್ಮೀರ ಪರದೇಸಿ ಇದೇ ಮೊದಲ ಬಾರಿಗೆ ನಿಖಿಲ್ ಜೋಡಿ ಯಾಗಿದ್ದು ಈಗಾಗಲೇ ಸಿನಿಮಾ ಟೀಸರ್ ನಿಂದ ಬಾರಿ ನಿರೀಕ್ಷೆ ಹುಟ್ಟುಹಾಕಿದೆ…ಸೀತಾ ರಾಮ‌ಕಲ್ಯಾಣದ ನಂತ್ರ ರಿಲೀಸ್ ಆಗ್ತಿರೋ ಚಿತ್ರ ಇದಾಗಿದ್ದು ಟೈಟಲ್ ನಲ್ಲಿರುವಂತೆಯೇ ನಿಖಿಲ್ ಸ್ಫೋರ್ಟ್ಸ್ ಪರ್ಸನ್ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…ಅದ್ರ ಜೊತೆಯಲದಲಿ ಮತ್ತೊಂದು ಶೇಡ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರಂತೆ ನಿಖಿಲ್ ..

ಸದ್ಯ ಚಿತ್ರದ ಡವ ಡವ…ಡವ..ಡವ ಹಾಡು ಟ್ರೆಂಡ್ ಹುಟ್ಟುಹಾಕಿದ್ದು ..ಸೋಷಿಯಲ್ ‌ಮಿಡಿಯಾ‌ದಲ್ಲಿ ಹಾಡು ಭಾರಿ ಹವಾ ಕ್ರಿಯೆಟ್ ಮಾಡಿದೆ..ಆರಂಭದಲ್ಲಿ ಖುದ್ದು ನಿಖಿಲ್ ಅವ್ರೇ ಈ ಹಾಡಿಗೆ ರೀಲ್ಸ್ ಮಾಡುವ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ್ರು…ಈಗ ಚಿತ್ರ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪತ್ನಿ ಜೊತೆ ಡವ ಡವ ಡವ ಡವಾ ಹಾಡಿಗೆ ಹೆಜ್ಜೆ ಹಾಕಿ ಚಿತ್ರ ಪ್ರಚಾರ ಮುಂದುವರೆಸಿದ್ದಾರೆ ನಿಖಿಲ್…

ಇದು ನಿಖಿಲ್ ಹಾಗೂ ರೇವತಿಯ ಮೊದಲ ರೀಲ್ಸ್ ಆಗಿದ್ದು ಅಭಿಮಾನಿಗಳು ನಿಖಿಲ್ ಮತ್ತು ರೇವತಿ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ…ರೇವತಿ ಹಾಡಿನಲ್ಲಿ ಒಂದೇ ಸೀನ್ ನಲ್ಲಿ ಬಂದರು ನೆಟ್ಟಿಗರು ಮಾತ್ರ ವಿಡಿಯೋವನ್ನ ಪದೇ ಪದೇ ನೋಡಿ ಎಂಜಾಯ್ ಮಾಡ್ತಿದ್ದಾರೆ….