- May 12, 2022
ತೂಕ ಇಳಿಸಿಕೊಂಡ ಕೊಡಗಿನ ಬೆಡಗಿ


ಪಂಚರಂಗಿ ಸಿನಿಮಾದಲ್ಲಿ ನಾಯಕಿ ಅಂಬಿಕಾ ಆಗಿ ನಟಿಸಿ ಸಿನಿಪ್ರಿಯರ ಮನ ಸೆಳೆದಿರುವ ಕೊಡಗಿನ ಕುವರಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ಮೂಲಕ ಮನೆ ಮಾತಾದ ಬೆಡಗಿ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ನಿಧಿ ಸುಬ್ಬಯ್ಯ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ.


ಹೌದು, ತೂಕ ಇಳಿಸಿಕೊಂಡು ಸಣ್ಣಗಾಗಿರುವ ನಿಧಿ ಸುಬ್ಬಯ್ಯ ಇತ್ತೀಚೆಗಷ್ಟೇ ವೆಸ್ಟರ್ನ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಪಡ್ಡೆ ಹೈಕ್ಕಳ ಮನ ಕದ್ದಿರುವುದಂತೂ ನಿಜ. ಕೊಡಗಿನ ಕುವರಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಮನ ಸೋತಿದ್ದಾರೆ. ಮಾತ್ರವಲ್ಲ ತಮ್ಮ ನೆಚ್ಚಿನ ನಟಿ ಮತ್ತೆ ಕಂ ಬ್ಯಾಕ್ ಆಗಲಿದ್ದಾರಾ ಎಂಬ ಸಂಶಯ ವೀಕ್ಷಕರಿಗೆ ಮೂಡಿದೆ.


ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ನಿಧಿ ಅಭಿಮಾನಿ ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಂತಹ ಸದ್ದು ಏನು ಮಾಡಲಿಲ್ಲ. ಮುಂದೆ ಅಪ್ಪು ಅಭಿನಯದ ಅಣ್ಣಾ ಬಾಂಡ್ ನಲ್ಲಿ ನಟಿಸಿದ್ದ ಈಕೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಪರಭಾಷೆಯ ಸಿನಿರಂಗದಲ್ಲಿಯೂ ಮೋಡಿ ಮಾಡಿರುವ ನಿಧಿ ಸುಬ್ಬಯ್ಯ ಆಯುಷ್ಮಾನ್ ಭವ ಸಿನಿಮಾದ ನಂತರ ನಟನೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ.




ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ನಿಧಿ ಸುಬ್ಬಯ್ಯ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಮತ್ತೆ ಈಕೆ ನಟನೆಗೆ ಮರಳುತ್ತಾರಾ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಗಬೇಕಿದೆ.




