- May 8, 2022
ಹಿರಿತೆರೆಯ ಹೊಸ ಖಳನಾಯಕಿ ಈಕೆ


ಮನೋಜ್ಞ ನಟನೆಯ ಮೂಲಕ ವೀಕ್ಷಕರನ್ನು ಸೆಳೆದಿರುವ ಸುಕನ್ಯಾ ಗಿರೀಶ್ ತಮ್ಮ ಮೂರನೇ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ “ಸಮರ್ಥ್” ಚಿತ್ರದಲ್ಲಿ ಪ್ರವೀರ್ ಶೆಟ್ಟಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ರಾಜು ನಿರ್ದೇಶನ ಮಾಡುತ್ತಿದ್ದಾರೆ.






ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿರುವ ಸುಕನ್ಯಾ “ನನ್ನ ಪಾತ್ರ ನೆಗೆಟಿವ್ ಶೇಡ್ ಹೊಂದಿದೆ ಹಾಗೂ ನಂತರ ನಾನು ಧನಾತ್ಮಕ ವ್ಯಕ್ತಿಯಾಗಿ ಬದಲಾಗುತ್ತೇನೆ. ಹೀಗಾಗಿ ತುಂಬಾ ಭಾವನೆಗಳನ್ನು ಹೊಂದಿದೆ. ಇದು ನನ್ನನ್ನು ಸಬ್ಜೆಕ್ಟ್ ಇಷ್ಟಪಡುವಂತೆ ಮಾಡಿತು. ಅಚ್ಯುತ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿದೆ. ಅವರ ಮಗಳ ಪಾತ್ರ ಮಾಡುತ್ತಿದ್ದೇನೆ. ನಟನೆಯ ಹಲವು ಅಂಶಗಳನ್ನು ಅವರಿಂದ ಕಲಿಯಲು ನೋಡುತ್ತಿದ್ದೇನೆ.






ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಟಿಸುತ್ತಿರುವ ಸುಕನ್ಯಾ “ನಾನು ಇಲ್ಲಿ ಖಳನಾಯಕಿ ಪಾತ್ರ ಮಾಡುತ್ತಿದ್ದೇನೆ. ಈ ಪಾತ್ರ “ಸಮರ್ಥ್” ಸಿನಿಮಾದಲ್ಲಿ ನಿರ್ವಹಿಸುತ್ತಿರುವ ಪಾತ್ರಕ್ಕೆ ವಿರುದ್ಧವಾಗಿದೆ” ಎಂದಿದ್ದಾರೆ.








