• April 19, 2022

ತುಳು ಚಿತ್ರದ ವಿಭಿನ್ನ ವೈಖರಿ

ತುಳು ಚಿತ್ರದ ವಿಭಿನ್ನ ವೈಖರಿ

ತುಳು ಚಿತ್ರಗಳು ಇಂದು ಭಾರತದ ಗಡಿ ಮೀರಿ ಬೆಳೆಯುತ್ತಿದೆ. ಇದೀಗ ತುಳು ಚಿತ್ರವೊಂದು 11 ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿರುವುದೇ ಅದಕ್ಕೆ ಸಾಕ್ಷಿ. ತುಳು ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಚಿತ್ರ ಜಗತ್ತಿನ ಹನ್ನೊಂದು ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿದೆ.

ವೈಭವ್ ಪ್ಲಿಕ್ಸ್ ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ “ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ” ಚಿತ್ರ ತಯಾರಾಗಿದ್ದು ಮೇ 13,14,15 ರಂದು ಹಲವು ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಪ್ರೀಮಿಯರ್ ಶೋ ನ ಉದ್ಘಾಟನೆ ಎಪ್ರಿಲ್ 24ರಂದು ದುಬೈನಲ್ಲಿ ಇರುವ ಮಾರ್ಕೋ ಪೋಲೋ ಹೋಟೆಲ್ ನಲ್ಲಿ ನಡೆಯಲಿದೆ.

ಯುಎಸ್ ಎ , ಲಂಡನ್ , ಸೌದಿ ಅರೇಬಿಯಾ ,ಇಸ್ರೇಲ್ , ಬಹ್ರೇನ್ , ಕುವೈತ್, ನೈಜೀರಿಯಾ ಮುಂತಾದ ದೇಶಗಳಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತದ ಮಹಾ ನಗರಗಳಾದ ಮಂಗಳೂರು , ಬೆಂಗಳೂರು , ಮುಂಬೈ , ಪುಣೆ , ಮೈಸೂರು , ಬರೋಡಾಗಳಲ್ಲಿ ಚಿತ್ರ ಪ್ರದರ್ಶನ ಆಗಲಿದೆ. ಒಂದೂವರೆ ಕೋಟಿ ರೂಪಾಯಿ ಬಜೆಟ್ ನ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಚಿತ್ರ ಮೇ 20ರಂದು ತೆರೆ ಕಾಣಲಿದೆ.

ಯುವನಟ ರಾಹುಲ್ ಅಮೀನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕರಾಗಿ ನಟಿಸಿದ್ದು ಅವರೇ ಕಥೆಯನ್ನು ಬರೆದಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ವಿಷ್ಣು ಪ್ರಸಾದ್ ಛಾಯಾಗ್ರಹಣ, ಸೃಜನ್ ಕುಮಾರ್ ತೋನ್ಸೆ ಸಂಗೀತ ನಿರ್ದೇಶನ ಇದಕ್ಕಿದೆ.

ಯಶ ಶಿವಕುಮಾರ್ , ಕರಿಷ್ಮಾ ಅಮೀನ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ನವೀನ್ ಡಿ ಪಡೀಲ್ , ಅರವಿಂದ್ ಬೋಳಾರ್ , ಭೋಜರಾಜ ವಾಮಂಜೂರು ಮುಂತಾದ ಕಲಾವಿದರು ನಟಿಸಿದ್ದಾರೆ.