• May 9, 2022

ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ವಿಭಿನ್ನ ಸಿನಿಮಾ

ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ವಿಭಿನ್ನ ಸಿನಿಮಾ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ನಿವೇದಿತಾ ನಿರ್ಮಾಣದ ವೆಬ್ ಸಿರೀಸ್ “ಹನಿಮೂನ್” ಇದೀಗ ಬಿಡುಗಡೆಯಾಗಲಿದೆ ಅಂದ ಹಾಗೇ ವರ್ಷಗಳ ಹಿಂದೆಯೇ ಹನಿಮೂನ್ ವೆಬ್ ಸಿರೀಸ್ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಬಿಡುಗಡೆಯಾಗುವುದು ಮುಂದೆ ಹೋಗಿದ್ದು, ಇದೀಗ ಬಿಡುಗಡೆಯಾಗುತ್ತಿರುವುದು ವೀಕ್ಷಕರಿಗೆ ಸಂತಸ ತಂದಿದೆ.

ಅಂದ ಹಾಗೇ ವೂಟ್ ಸೆಲೆಕ್ಟ್ ಎನ್ನುವ ಓಟಿಟಿ ಯಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗಲಿರುವ ಈ ವೆಬ್ ಸಿರೀಸ್ ನಲ್ಲಿ ನಾಗಭೂಷಣ್ ಹಾಗೂ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ವೆಬ್ ಸಿರೀಸ್ ನ ಟೀಸರ್ ಬಿಡುಗಡೆಯಾಗಿದ್ದು ಸಂಪೂರ್ಣ ಸಂಚಿಕೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಅಷ್ಟಕ್ಕೂ ಹನಿಮೂನ್ ನ ಕಥಾಹಂದರವೇನು?
ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ನವದಂಪತಿಗಳು ಹನಿಮೂನ್ ಗಾಗಿ ಕೇರಳಕ್ಕೆ ಹೋಗುತ್ತಾರೆಮ ಅಲ್ಲಿ ಅವರ ನಡುವೆ ಏನೆಲ್ಲಾ ನಡೆಯುತ್ತದೆ, ಅವರ ನಡುವೆ ನಡೆಯುವ ಘಟನೆಗಳೇ ಹನಿಮೂನ್ ನ ಕಥಾಹಂದರ. ನಾಯಕ ಅಂಜುಬುರುಕ ಪ್ರವೀಣ್ ಆಗಿ ನಾಗಭೂಷಣ್ ನಿಮ್ಮ ಮುಂದೆ ಬರಲಿದ್ದಾರೆ. ಇನ್ನು ಮಾತುಗಾರ್ತಿ ತೇಜಸ್ವಿನಿ ಆಗಿ ಸಂಜನಾ ಆನಂದ್ ರಂಜಿಸಲಿದ್ದಾರೆ. ಇನ್ನು ಒಟ್ಟು
ಆರು ಸಂಚಿಕೆಗಳಲ್ಲಿ ಈ ವೆಬ್ ಸಿರೀಸ್ ಮೂಡಿಬಂದಿದೆ.

ಇನ್ನು ಇಒ ವೆಬ್ ಸಿರೀಸ್ ನಲ್ಲಿ ತೇಜಸ್ವಿನಿ ಪಾತ್ರ ಮಾಡಿರುವ ಸಂಜನಾ ಆನಂದ್ “ತುಂಬಾ ಉತ್ತಮ ಕಥಾಹಮನದರವುಳ್ಳ ಹನಿಮೂನ್ ವೆಬ್ ಸಿರೀಸ್ ನಲ್ಲಿ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಶಿವರಾಜ್ ಕುಮಾರ್ ಅವರ ಬ್ಯಾನರ್ ನಡಿಯಲ್ಲಿ ನಟಿಸಲು ಸಿಕ್ಕಿರುವುದು ನನ್ನ ಪುಣ್ಯವೇ ಸರಿ. ದಿಟ್ಟ ಹುಡುಗಿಯಾಗಿರುವ ತೇಜಸ್ವಿನಿಯು ಮನಸ್ಸಿನಲ್ಲಿರುವ ಮಾತನ್ನು ತಡಮಾಡದೇ ಹೇಳಿ ಬಿಡುತ್ತಾಳೆ” ಎಂದು ಹೇಳುತ್ತಾರೆ.