- April 11, 2022
ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಸಂತಸವಿದೆ ಎಂದ ನಟಿ


ಮಾಯಾ ಕನ್ನಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕಾಜಲ್ ಕುಂದರ್ ಈಗ ನಟ ಪ್ರಮೋದ್ ಅವರೊಂದಿಗೆ ಬಾಂಡ್ ರವಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈ ಸಿನಿಮಾದಲ್ಲಿ ಅವರ ಪಾತ್ರದ ಕುರಿತು ಮಾತನಾಡಿರುವ ಕಾಜಲ್ “ನನ್ನದು ಪಕ್ಕದ ಮನೆ ಹುಡುಗಿಯ ರೀತಿಯ ಪಾತ್ರವಾಗಿದೆ”ಎಂದಿದ್ದಾರೆ.


“ನಾನು ನನ್ನ ಪಾತ್ರದ ಬಗ್ಗೆ ಈಗ ಬರಿ ಇಷ್ಟನಷ್ಟೇ ಬಹಿರಂಗ ಮಾಡಬಲ್ಲೆ. ಚಿತ್ರತಂಡ ಕೂಡಾ ನನ್ನ ಪಾತ್ರದ ಬಗ್ಗೆ ಇಷ್ಟೇ ಹೇಳಲು ಬಯಸಿದೆ. ನಾನು ಪ್ರಮೋದ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅವರೊಬ್ಬ ಉತ್ತಮ ನಟ. ಅವರೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ತಂಡ ಕೊಡಚಾದ್ರಿ ,ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲು ಪ್ಲಾನ್ ಮಾಡಿದೆ” ಎಂದಿದ್ದಾರೆ.


ವಿನಯ್ ರಾಜ್ ಕುಮಾರ್ ಅವರೊಂದಿಗೆ ಪೇಪೆ ಚಿತ್ರದಲ್ಲಿ ನಟಿಸುತ್ತಿರುವ ಕಾಜಲ್ ” ಈ ಸಿನಿಮಾ ಮಾಸ್ ಸಿನಿಮಾ ಆಗಿದೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ನನ್ನ ಪಾತ್ರ ಕಥೆಗೆ ತಿರುವು ತರುತ್ತದೆ” ಎಂದಿದ್ದಾರೆ.


ಮರಾಠಿ, ಹಿಂದಿ ಹಾಗೂ ತುಳು ಭಾಷೆಗಳಲ್ಲಿ ನಟಿಸಿರುವ ಕಾಜಲ್ ಅವರಿಗೆ ಈಗ ಕನ್ನಡದಿಂದಲೂ ಆಫರ್ಸ್ ಬರುತ್ತಿವೆ.”ಕೆರಿಯರ್ ನ ಆರಂಭದಲ್ಲಿ ಕನ್ನಡದಲ್ಲಿ ನನಗೆ ಆಫರ್ಸ್ ಬರುತ್ತಿರುವುದು ಖುಷಿ ಇದೆ. ನನ್ನ ಪರಿಶ್ರಮಕ್ಕೆ ಈಗ ಫಲ ದೊರೆಯುತ್ತಿದೆ. ಆದರೆ ಇನ್ನೂ ಸಾಗುವುದು ತುಂಬಾ ಇದೆ” ಎಂದಿದ್ದಾರೆ.




ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿರುವ ಕಾಜಲ್ ” ಇದು ನನಗೆ ವಿವಿಧ ಸಂಸ್ಕೃತಿ , ಕೆಲಸದ ನೀತಿ, ಸಂಪ್ರದಾಯಗಳನ್ನು ಕಲಿಯುವುದಕ್ಕೆ ಅವಕಾಶ ನೀಡಿದೆ” ಎಂದಿದ್ದಾರೆ.




