• July 4, 2022

ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಮಾತು!! ನಂದಕಿಶೋರ್ ಆಕ್ರೋಶ.

ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಮಾತು!! ನಂದಕಿಶೋರ್ ಆಕ್ರೋಶ.

‘ಅಭಿನಯ ಚಕ್ರವರ್ತಿ’, ಕನ್ನಡಿಗರ ಮನದ ‘ಬಾದ್ ಶಾಹ್’ ಕಿಚ್ಚ ಸುದೀಪ್ ಅವರು ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಅವರ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಈ ತಿಂಗಳಿನ ಅಂತ್ಯಕ್ಕೆ ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಹಾಗು ವಿಡಿಯೋಗಳು ಸಿನಿರಸಿಕರನ್ನು ಚಿತ್ರ ನೋಡಲು ಹಾತೊರೆದು ಕಾಯುವಂತೆ ಮಾಡಿದ್ದು, ಸದ್ಯ ಚಿತ್ರತಂಡ ತನ್ನ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ನಡುವೆ ಹಲವು ಅಭಿಮಾನಿಗಳು ಬಹುಪಾಲು ದೇವರೇ ಎಂದು ಪೂಜಿಸೋ ಕಿಚ್ಚ ಸುದೀಪ್ ಅವರ ಬಗ್ಗೆ ಯುವಕನೊಬ್ಬ ಅದರಲ್ಲೂ ಕನ್ನಡಿಗನೇ ಒಬ್ಬ ಅವಾಚ್ಯ ಶಬ್ದಗಳನ್ನೊಳಗೊಂಡ ವಿಡಿಯೋ ಒಂದರ ಮೂಲಕ ಅವಮಾನ ಮಾಡಿದ್ದಾನೆ. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಡಿಸಿದ್ದಾರೆ.

ಸುದೀಪ್ ಅವರಿಗೆ ಅವರ ಸಿನಿಮಾ ನೋಡಿ ಹುಟ್ಟಿಕೊಂಡ ಅಮಾನಿಗಳಷ್ಟೇ, ಅವರ ಸಾಮಾಜಿಕ ಕೆಲಸಗಳನ್ನು ಕಂಡು ಹುಟ್ಟಿಕೊಂಡ ಅಭಿಮಾನಿಗಳಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಹಲವು ಸಮಾಜಸ್ನೇಹಿ ಕೆಲಸಗಳನ್ನು ಮಾಡಿರುವ ಸುದೀಪ್ ಅವರನ್ನು ಯುವಕನೊಬ್ಬ ಹುಡುಗನೊಬ್ಬನ ಸಾವಿಗೆ ಕಾರಣರಾಗಿದ್ದಾರೆ ಎಂದು ದೂಷಿಸಿದ್ದಾನೆ. ಕರ್ನಾಟಕದ ಕುಗ್ರಾಮ ಒಂದರಲ್ಲಿ ತಂದೆಯೊಬ್ಬ ತನ್ನ 11 ವರ್ಷದ ಮಗನನ್ನ ತಾನೇ ಕೊಂದಿದ್ದಾರೆ. ಕಾರಣ ತಂದೆ ಜೂಜಿನಲ್ಲಿ ಹಣ ಹೂಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಸಾಲಗಾರರು ಅವನ ಬೆನ್ನು ಬಿದ್ದಿದ್ದರು.ಈ ವಿಷಯ ಮಗನಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಆ ವ್ಯಕ್ತಿ ತನ್ನ ಮಗನನ್ನೇ ಕೊಂದು ಹಾಕಿದ್ದಾನೆ. ಹಾಗಾಗಿ ಜೂಜಿನ ಆಪ್ ಒಂದರ ಜಾಹೀರಾತಿನಲ್ಲಿ ಭಾಗಿಯಾಗಿದ್ದಕ್ಕೆ, ಆ ಕುಟುಂಬದ ಈಗಿನ ಪರಿಸ್ಥಿತಿಗೆ ಹಾಗು ಆ ಹುಡುಗನ ಸಾವಿಗೆ ಸುದೀಪ್ ಅವರೇ ಜವಾಬ್ದಾರರು ಎಂದು ಅವರ ಬಗ್ಗೆ ಅವಾಚ್ಯ ಮಾತುಗಳನ್ನ ಆಡುತ್ತ ನಿಂದಿಸಿ, ಅವಮಾನಿಸಿದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಈತ ಹರಿಬಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೋ ಗೆ ಪ್ರತಿಕ್ರಿಯಿಸಿರೋ ಸುದೀಪ್ ಆಪ್ತರೂ, ಕನ್ನಡ ಚಿತ್ರರಂಗದ ಸಕ್ರಿಯ ನಿರ್ದೇಶಕರೂ ಆಗಿರುವ ನಂದಕಿಶೋರ್ ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ಕನ್ನಡ ಚಿತ್ರರಂಗದ ಯಾವುದೇ ನಟರನ್ನು ಅವಮಾನಿಸೋ ಮೊದಲು ನೂರಾರು ಬಾರಿ ಯೋಚಿಸುವುದು ಒಳ್ಳೆಯದು. ಸುದೀಪ್ ಅವರ ವಿರುದ್ಧ ನಿನ್ನ ಬಳಿ ಯಾವುದಾದರೂ ಸಾಕ್ಷಿ ಇದೆಯಾ? ಇದ್ದರೆ ಬಂದು ಮಾತನಾಡು. ತಮ್ಮ ಮಗನ ಸಾವಿಗೆ ಸುದೀಪ್ ಅವರೇ ಕಾರಣ ಎಂದು ಎಲ್ಲಾದರೂ ಆ ಹುಡುಗನ ಮನೆಯವರು ದೂರು ನೀಡಿದ್ದಾರ? ಕಾರಣವಿಲ್ಲದೆ ಒಬ್ಬ ಕಲಾವಿದನನ್ನ ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ? ನೀನು ನೀಯತ್ತಾಗಿ ಮಾತನಾಡಿದ್ದಾರೆ ನಿನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿರಲಿಲ್ಲ. ನೀನು ಗಂಡಸೇ ಆದರೆ ಈ ಪ್ರಕರಣಕ್ಕೆ ಸುದೀಪ್ ಅವರೇ ಕಾರಣ ಎಂದು ಸಾಬೀತು ಪಡಿಸು. ಸುಮ್ಮನೆ ಕನ್ನಡದ ಯಾವ ಕಲಾವಿದರನ್ನು ಅಪಮಾನ ಮಾಡಿದರೆ ಕನ್ನಡಿಗರು ಸುಮ್ಮನಿರುವುದಿಲ್ಲ” ಎಂದು ಹೇಳುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತುಗಳಿಂದ ಜೀವ ಹೋಯಿತು ಎಂಬ ಈ ಮಾತು ಎಷ್ಟರ ಮಟ್ಟಿಗೆ ಸರಿ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಈ ಬಗ್ಗೆ ಸುದೀಪ್ ಅವರು ಎಲ್ಲೂ ಪ್ರತಿಕ್ರಯಿಸಿಲ್ಲ. ಆದರೆ ಅವರ ಅಭಿಮಾನಿಗಳು ಹಾಗು ಹಲವು ಕಲಾವಿದರು ಈ ವಿಷಯದ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಸದ್ಯ ಈ ಪ್ರಕರಣ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.