• March 14, 2022

ಈಕೆ ನಾಯಕಿ ಮಾತ್ರವಲ್ಲ ಗಾಯಕಿಯೂ ಹೌದು!

ಈಕೆ ನಾಯಕಿ ಮಾತ್ರವಲ್ಲ ಗಾಯಕಿಯೂ ಹೌದು!

2021 ರ ಬ್ಲಾಕ್ ಬಾಸ್ಟರ್ ಸಿನಿಮಾ ರಾಬರ್ಟ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಆಶಾ ಭಟ್ ಮೊದಲ ಸಿನಿಮಾದಲ್ಲಿಯೇ ಮನೆ ಮಾತಾದಾಕೆ. ನಟನೆಯ ಹೊರತಾಗಿ ಇದೀಗ ಈಕೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಾಡುಗಳ ವಿಡಿಯೋದ ತುಣುಕುಗಳನ್ನು ಶೇರ್ ಮಾಡುತ್ತಿದ್ದ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ನ್ನು ಬಿಡುಗಡೆ ಮಾಡಿದ್ದಾರೆ.

ಕನ್ನಡದ ಸಿನಿ ರಂಗದ ಎವರ್ ಗ್ರೀನ್ ಹಾಡು ಎನಿಸಿಕೊಂಡಿರುವ ತುಂತುರು ಅಲ್ಲಿ ನೀರ ಹಾಡು ಎನ್ನುವ ಸುಮಧುರ ಹಾಡಿಗೆ ದನಿಯಾಗಿರುವ ಆಶಾ ತಮ್ಮ ಸುಂದರ ಧ್ವನಿಯಿಂದ ಕನ್ನಡಿಗರ ಮನಗೆದ್ದಿದ್ದಾರೆ.

ತಮ್ಮ ಕವರ್ ಸಾಂಗ್ ನ ಝಲಕ್ ನ್ನು ಆಶಾ ಭಟ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರ ಜೊತೆಗೆ ಸಂಗೀತ ಪ್ರಿಯರ ಮನ ಸೆಳೆದಿದ್ದಾರೆ ಆಶಾ ಭಟ್. ಕನ್ನಡದ ಸೂಪರ್ ಹಿಟ್ ಚಿತ್ರ ಅಮೃತವರ್ಷಿಣಿ ಯ “ತುಂತುರು ಅಲ್ಲಿ ನೀರ ಹಾಡು” ಹಾಡುವ ಮೂಲಕ ತಮ್ಮ ಮಧುರ ಕಂಠದ ಪರಿಚಯ ಮಾಡಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಶಾ ಭಟ್” ಕೊನೆಗೂ ನನ್ನ ಮೊದಲ ಕವರ್ ಸಾಂಗ್ ಬಿಡುಗಡೆಯಾಗಿದೆ. ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋವು ಈಗಾಗಲೇ 9.6k ವೀಕ್ಷಣೆ ಪಡೆದಿದೆ. ನಿಮ್ಮೆಲ್ಲರ ಪ್ರೀತಿಗೆ ಚಿರ ಋಣಿ. ಈ ವಿಡಿಯೋ ಮಾಡಲು ಸಹಾಯ ಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು”ಎಂದು ಬರೆದುಕೊಂಡಿದ್ದಾರೆ.

2014ರಲ್ಲಿ ಮಿಸ್ ಸುಪ್ರ ನ್ಯಾಷನಲ್ ಅವಾರ್ಡ್ ಗೆದ್ದಿರುವ ಆಶಾ ಭಟ್ ಈ ಅವಾರ್ಡ್ ಪಡೆದ ಮೊದಲ ಭಾರತೀಯ ಮಹಿಳೆಯೂ ಹೌದು. ಹಿಂದಿಯ ಜಂಗ್ಲಿ ಸಿನಿಮಾದಲ್ಲಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಆಶಾ ಭಟ್ ರಾಬರ್ಟ್ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿದ್ದಾರೆ.