- April 10, 2022
ಟಾಲಿವುಡ್ ಪ್ರಿನ್ಸ್ ಜೊತೆಗಿನ ಪೋಟೋ ಹಂಚಿಕೊಂಡ ಮೇಘಾ ಶೆಟ್ಟಿ


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾಯಕಿ ಅನು ಸಿರಿಮನೆ ಆಗಿ ಅಭಿನಯಿಸುದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೇಘಾ ಶೆಟ್ಟಿ ಕಡಿಮೆ ಅವಧಿಯಲ್ಲಿಯೇ ಕರುನಾಡಿನಾದ್ಯಂತ ಮನೆ ಮಾತಾದ ಚೆಲುವೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಮನೋಜ್ಞ ನಟನೆಯ ಮೂಲಕ ಸೀರಿಯಲ್ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಮೇಘಾ ಶೆಟ್ಟಿ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ ಪ್ರತಿಭೆ.




ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕೆಂಡಸಂಪಿಗೆಯ ನಿರ್ಮಾಪಕಿಯಾಗಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಇಂತಿಪ್ಪ ಮೇಘಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.


ಹೌದು.ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಅವರೊಂದಿಗೆ ಇರುವ ಮೂರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮೇಘಾ ಅವರು ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದೇಕೆ ಎಂಬ ಪ್ರಶ್ನೆಗೆ ಅವರಿನ್ನು ಉತ್ತರ ಕೊಟ್ಟಿಲ್ಲ.




ಇನ್ನು ಮೇಘಾ ಶೆಟ್ಟಿ ಅವರು ಮಹೇಶ್ ಬಾಬು ಜೊತೆ ಜಾಹೀರಾತಿನಲ್ಲಿ ನಟಿಸುತ್ತಿದ್ಧಾರಾ? ಅವರನ್ನು ಭೇಟಿಯಾಗಿದ್ದು ಏಕೆ? ಎಂಬೆಲ್ಲಾ ಪ್ರಶ್ನೆಗಳು ಈಗ ಅಭಿಮಾನಿಗಳ ಮನದಲ್ಲಿ ಮೂಡಿವೆ. ಆದರೆ ಅಭಿಮಾನಿಗಳ ಪ್ರಶ್ನೆಗಳಿಗೆಲ್ಲಾ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ.






