• January 28, 2022

ಮೆಗಾಸ್ಟಾರ್ ಫ್ಯಾಮಿಲಿ ಗೆ ಎಂಟ್ರಿ ಕೊಟ್ಟ ಕೋವಿಡ್

ಮೆಗಾಸ್ಟಾರ್ ಫ್ಯಾಮಿಲಿ ಗೆ ಎಂಟ್ರಿ ಕೊಟ್ಟ ಕೋವಿಡ್

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ …ಕೋವಿಡ್ ದೃಢ ಪಡುತ್ತಿದ್ದಂತೆ ಚಿರು ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ ..

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ( Twitter ) ಮಾಹಿತಿ ಹಂಚಿಕೊಂಡಿರುವಂತ ಮೆಗಾಸ್ಟಾರ್ ಚಿರಂಜೀವಿ ಕಳೆದ ರಾತ್ರಿ ಕೊರೋನಾ ಗುಣಲಕ್ಷಣಗಳನ್ನು ಸಣ್ಣ ಪ್ರಮಾಣದಲ್ಲಿ ಹೊಂದಿದ ಕಾರಣ ನಾನು ಪರೀಕ್ಷೆಗೆ ಒಳಪಟ್ಟಿದ್ದೆ. ಕೋವಿಡ್ ಪರೀಕ್ಷೆಯಲ್ಲಿ ತಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ. ತನ್ನ ಸಂಪರ್ಕದಲ್ಲಿದ್ದಂತ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.

ಚಿರಂಜೀವಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವಿಚಾರ ಗೊತ್ತಾದ ಕೂಡಲೇ ಟಾಲಿವುಡ್ ಸಿನಿಮಾ ಕಲಾವಿದರು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ