• February 8, 2022

ಬೋಲ್ಡ್ ಲುಕ್ ಮೂಲಕ ಸದ್ದು ಮಾಡುತ್ತಿದ್ದಾರೆ ಮೀರಾ ಜಾಸ್ಮಿನ್

ಬೋಲ್ಡ್ ಲುಕ್ ಮೂಲಕ ಸದ್ದು ಮಾಡುತ್ತಿದ್ದಾರೆ ಮೀರಾ ಜಾಸ್ಮಿನ್

ಮಲೆಯಾಳಂ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಮೀರಾ ಜಾಸ್ಮಿನ್ ಕೂಡಾ ಒಬ್ಬರು. ಮಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದ ಮೀರಾ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿಯೂ ನಟಿಸಿ ಅಭಿಮಾನಿಗಳನ್ನು ಗಳಿಸಿದರು. ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಈಗ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಜನವರಿ 20ರಂದು ಇನ್ಸ್ಟಾಗ್ರಾಂ ಖಾತೆ ತೆರೆದಿರುವ ನಟಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಾತ್ರವಲ್ಲ ಖಾತೆ ತೆರೆದ ಮೊದಲ ದಿನವೇ
ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದ ಮೀರಾ ಜಾಸ್ಮಿನ್ ಸಾಕಷ್ಟು ಸದ್ದು ಮಾಡಿದ್ದಂತೂ ನಿಜವೆನ್ನಿ.

ಇನ್ನು ಇದೀಗ ಸ್ಲಿಮ್ ಆಗಿರುವ ನಟಿ ತಮ್ಮ ಮಾದಕ ನೋಟದಿಂದ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ. ಸದ್ಯ ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಮೀರಾ ಸಖತ್ ಬೋಲ್ಡ್ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಜಾಕೆಟ್ ಹಾಗೂ ಬ್ರಾ ಧರಿಸಿ ಎದೆ ಸೀಳು ಕಾಣುವಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಈ ಫೋಟೋಕ್ಕೆ 70 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು ಅಧಿಕ ಕಾಮೆಂಟ್ಸ್ ಗಳನ್ನು ಬರೆದಿದ್ದಾರೆ.

ಮನೋಜ್ಞ ನಟನೆಯ ಮೂಲಕ ಚಿತ್ರರಂಗದಲ್ಲಿ ಮಿಂಚಿದ್ದ ಮೀರಾ ಜಾಸ್ಮಿನ್ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಚೆಲುವೆ. 2014ರಲ್ಲಿ ದುಬೈ ಮೂಲದ ಅನಿಲ್ ಜಾನ್ ಟಿಟನ್ ಅವರನ್ನು ಮದುವೆಯಾಗಿದ್ದರು. ಬಳಿಕ ಚಿತ್ರರಂಗದಿಂದ ದೂರ ಸರಿದ ಮೀರಾ ಮುಂದೆ ಮಾನಸಿಕ ಸಮಸ್ಯೆಯಿಂದ ಪತಿಯಿಂದ ದೂರವಾಗಿದ್ದರು. ಈಗ ಸಿನಿಮಾ ಕಡೆ ಮುಖ ಮಾಡಿರುವ ನಟಿ ಮಲೆಯಾಳಂ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಉತ್ತಮ ಅವಕಾಶಗಳು ದೊರೆತರೆ ಯಾವುದೇ ಭಾಷೆಯಾಗಿರಲಿ ನಾನು ನಟಿಸಲು ಸಿದ್ಧಳಿದ್ದೇನೆ ಎಂದು ಹೇಳುವ ಮೀರಾ ಜಾಸ್ಮಿನ್ ಕನ್ನಡದ ಅರಸು, ಮೌರ್ಯ, ದೇವರು ಕೊಟ್ಟ ತಂಗಿ, ಹೂ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.