• January 2, 2022

ನಮ್ಮನೆ ಯುವರಾಣಿ ಧಾರಾವಾಹಿಗೆ ಗುಡ್ ಬೈ ಹೇಳಿದ ಮೀರಾ-ಅನಿಕೇತ್

ನಮ್ಮನೆ ಯುವರಾಣಿ ಧಾರಾವಾಹಿಗೆ ಗುಡ್ ಬೈ ಹೇಳಿದ ಮೀರಾ-ಅನಿಕೇತ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಸಂಜೆ 5-40 ಕ್ಕೆ ಪ್ರಸಾರವಾಗುವ ನಮ್ಮವನೇ ಯುವರಾಣಿ ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ.. ಈ ಧಾರಾವಾಹಿಯ ಮೂಲಕವೇ ಮನೆಮಾತಾಗಿದ್ದ ಮೀರಾ ಹಾಗೂ ಅನಿಕೇತ್ ಪಾತ್ರಧಾರಿಗಳು ಬದಲಾಗಿದ್ದಾರೆ …

ಧಾರಾವಾಹಿಯಲ್ಲಿ ಮೀರಾ ಪಾತ್ರ ನಿರ್ವಹಿಸುತ್ತಿದ್ದ ಅಂಕಿತಾ ಅಮರ್ ಹಾಗೂ ಅನಿಕೇತ್ ಪಾತ್ರ ನಿರ್ವಹಿಸುತ್ತಿದ್ದ ದೀಪಕ್ ಇಬ್ಬರೂ ಬದಲಾಗಿದ್ದಾರೆ… ಇಬ್ಬರೂ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ನಡೆದಿದ್ದು ಈಗಾಗಲೇ ಆ ಪಾತ್ರಕ್ಕೆ ಬೇರೆ ಕಲಾವಿದರು ಎಂಟ್ರಿಕೊಟ್ಟಿದ್ದಾರೆ ..

ಮೀರಾ ಮತ್ತು ಅನಿಕೇತ್ ಪಾತ್ರಗಳು ಪ್ರೇಕ್ಷಕರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು
.. ಅವರ ಹೆಸರಿನಲ್ಲಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ ಕ್ಲಬ್ ಗಳು ಹುಟ್ಟಿಕೊಂಡಿದ್ದು.. ಆದರೆ ಈಗ ಧಾರಾವಾಹಿಯಲ್ಲಿ ಆಗಿರುವ ಮಹತ್ವದ ಬದಲಾವಣೆ ಪ್ರೇಕ್ಷಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದುನೋಡಬೇಕು..ಹಿಂದಿನಂತೆಯೇ ಪ್ರೇಕ್ಷಕರು ಅದೇ ಆಸಕ್ತಿಯಿಂದ ಧಾರಾವಾಹಿಯನ್ನ ವೀಕ್ಷಿಸುತ್ತಾರಾ…ಮೀರ ಹಾಗೂ ಅನಿಕೇತ್ ಪಾತ್ರಧಾರಿಗಳು ಇಲ್ಲದ ಕಾರಣ ಧಾರಾವಾಹಿಯ ರೇಟಿಂಗ್ ಕಡಿಮೆಯಾಗುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ…