- May 14, 2022
ಅಜಿತ್ ಜೊತೆಗೆ ನಟಿಸಲಿದ್ದಾರಾ ಈ ಸ್ಟಾರ್ ನಟಿ


ಮಲೆಯಾಳಂ ಚಿತ್ರರಂಗದ ಫೇಮಸ್ ನಟಿ ಮಂಜು ವಾರಿಯರ್ ತಮಿಳು ನಟ ಅಜಿತ್ ಜೊತೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅಸುರನ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಂಜು ಈಗ ಅಜಿತ್ ಸಿನಿಮಾಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ.




ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಅವರ ಅಭಿನಯದ ವಾಲ್ಮೈ ಚಿತ್ರ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಜಿತ್ ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಸಿನಿಮಾಗೆ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ವಾಲ್ಮೈ ಚಿತ್ರಕ್ಕೆ ಬೋನಿ ಕಪೂರ್ ಬಂಡವಾಳ ಹೂಡಿದ್ದರು. ಸದ್ಯಕ್ಕೆ ಎಕೆ 61 ಎಂದು ಟೈಟಲ್ ಇಡಲಾಗಿದೆ.




ಮಲೆಯಾಳಂ ಚಿತ್ರರಂಗದಲ್ಲಿ ತನ್ನ ಅಭಿನಯದಿಂದ ಛಾಪು ಮೂಡಿಸಿರುವ ಮಂಜು ವಾರಿಯರ್ ಈಗ ತಮಿಳಿನ ಸ್ಟಾರ್ ನಟ ಅಜಿತ್ ಜೊತೆ ಅಭಿನಯಿಸುತ್ತಿರುವುದು ಫ್ಯಾನ್ಸ್ ಗಳಲ್ಲಿ ಕುತೂಹಲ ಮೂಡಿಸಿದೆ.




ಸಿನಿತಂಡ ಮಂಜು ವಾರಿಯರ್ ಜೊತೆ ಮಾತುಕತೆ ನಡೆಸಿದ್ದು ಸದ್ಯದಲ್ಲೇ ಶೂಟಿಂಗ್ ಗೆ ಮಂಜು ವಾರಿಯರ್ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.




