• April 16, 2022

ಮತ್ತೆ ಬರಲಿದೆ ಮಜಾಟಾಕೀಸ್… ಯಾವಾಗ ಗೊತ್ತಾ?

ಮತ್ತೆ ಬರಲಿದೆ ಮಜಾಟಾಕೀಸ್… ಯಾವಾಗ ಗೊತ್ತಾ?

ಸದ್ಯ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಸೃಜನ್ ಲೋಕೇಶ್ ಅವರಿಗೆ ಪ್ರತಿ ಬಾರಿಯೂ ಮಜಾ ಟಾಕೀಸ್ ಶೋ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ.
ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೃಜನ್ ಅವರ ಮಜಾ ಟಾಕೀಸ್ ಶೋ ನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಮಜಾ ಟಾಕೀಸ್ ಶೋನ ಬಗ್ಗೆ ಮಾತನಾಡಿರುವ ಸೃಜನ್ “ಹೊಸ ಸಿನಿಮಾಗಳ ಪ್ರಚಾರ ಮಜಾ ಟಾಕೀಸ್ ನ ಭಾಗವಾಗಿದೆ. ಇದು ಶೋನ ಪ್ರಮುಖ ಕೇಂದ್ರಬಿಂದು. ಸೆಲೆಬ್ರಿಟಿಗಳನ್ನು ಆಹ್ವಾನಿಸುವುದು ಮಾತ್ರ ಈ ಶೋನ ಸಿದ್ದಾಂತ ಆಗಿಲ್ಲ. ಸಿನಿಮಾದ ತಂಡದ ಕರೆಸುವುದು ಪ್ರಚಾರಕ್ಕಾಗಿ ಮಾತ್ರ. ಕನ್ನಡ ಸಿನಿಮಾಗಳು ಮರಳಿ ಹಾದಿಗೆ ಬಂದಾಗ ಮಜಾ ಟಾಕೀಸ್ ಶೋ ಮರಳಿ ಬರಲಿದೆ. ನಮಗೆ ಆ ಕ್ಷಣಕ್ಕೆ ಕಾಯುವ ಅಗತ್ಯವಿದೆ” ಎಂದಿದ್ದಾರೆ.

“ಮಜಾ ಟಾಕೀಸ್ ಒಂದು ರೂಪಾಯಿಯನ್ನು ತೆಗೆದುಕೊಳ್ಳದೇ 500 ಸಿನಿಮಾಗಳನ್ನು ಪ್ರಚಾರ ಮಾಡಿದೆ. ಹಲವು ಪ್ರತಿಭೆಗಳನ್ನು ಹೊರಗೆ ತಲುಪುವಂತೆ ಮಾಡಿದೆ. ಹಲವು ಹೊಸ ಪ್ರತಿಭೆಗಳು ಮಜಾ ಟಾಕೀಸ್ ನ ಪ್ರಚಾರದ ಮೂಲಕ ಪರಿಚಯಿಸಲ್ಪಟ್ಟಿದ್ದಾರೆ. ಮಜಾ ಟಾಕೀಸ್ ಉತ್ತಮ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಹೆಮ್ಮೆಯಾಗುತ್ತದೆ” ಎಂದಿದ್ದಾರೆ.

“ಸೆಲೆಬ್ರಿಟಿಗಳು ಹಾಗೂ ಅತಿಥಿಗಳು ಮಾತ್ರವಲ್ಲ ಪ್ರೇಕ್ಷಕರು ಕೂಡಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಕೂಡಾ ಈ ವೇದಿಕೆಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಘಟನೆಗಳಾಗಿವೆ. ಮಜಾ ಟಾಕೀಸ್ ಶೋ ಹಲವು ಕಂಟೆಂಟ್ ಹಾಗೂ ಹಲವು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಜವಾಬ್ದಾರಿಯನ್ನು ಹೊಂದಿದೆ. ಇದೇ ಜವಾಬ್ದಾರಿ ಹಾಗೂ ರಂಜನೆಯ ಜೊತೆಗೆ ಮಜಾ ಟಾಕೀಸ್ ಬರಲಿದೆ” ಎಂದಿದ್ದಾರೆ.