• May 20, 2022

ಮತ್ತೆ ಮೋಡಿ ಮಾಡಲಿದ್ದಾರೆ ಮಾಧವನ್

ಮತ್ತೆ ಮೋಡಿ ಮಾಡಲಿದ್ದಾರೆ ಮಾಧವನ್

ಖ್ಯಾತ ನಟ ಆರ್ ಮಾಧವನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ “ರಾಕೆಟ್ರಿ: ದಿ ನಂಬಿ ಎಫೆಕ್ಟ್”ಚಿತ್ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅದ್ದೂರಿ ಸ್ವಾಗತ ಪಡೆದುಕೊಂಡಿದೆ. ಈ ಚಿತ್ರ ಫ್ರೆಂಚ್ ರಿವೇರಾದಲ್ಲಿ ಪ್ರದರ್ಶನ ಕಾಣಲಿದ್ದು ಆಗಲೇ ಎಲ್ಲಾ ಸೀಟ್ ಗಳು ವೇಗವಾಗಿ ಭರ್ತಿಯಾಗುತ್ತಿವೆ‌.

ಮೂಲಗಳ ಪ್ರಕಾರ “ರಾಕೆಟ್ರಿ : ದಿ ನಂಬಿ ಎಫೆಕ್ಟ್”ಚಿತ್ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಈ ವರ್ಷ ಎಲ್ಲರೂ ಎದುರು ನೋಡುತ್ತಿರುವಂತಹ ಚಿತ್ರವಾಗಿದೆ. ಸಿನಿಮಾ ಪ್ರದರ್ಶನ ಮೊದಲೇ ಎಲ್ಲರ ಆಸಕ್ತಿಯನ್ನು ಹೆಚ್ಚಿಸಿದೆ. ಇದು ವೆಬ್ ಸೈಟ್ ನಲ್ಲಿ ಪಟ್ಟಿ ಮಾಡದ ವಿಶೇಷ ಪ್ರದರ್ಶನವಾಗಿದೆ‌. ಆದರೆ ಜನರು ಇದಕ್ಕಾಗಿ ಸೀಟುಗಳನ್ನು ಪಡೆಯಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಕಥೆ ಹೇಳುತ್ತದೆ. ಮಾಧವನ್ ಈ ಸಿನಿಮಾ ಬರೆದು, ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ನಂಬಿ ನಾರಾಯಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ನಾನು ಈ ಸಿನಿಮಾ ನೋಡಿದ್ದೇನೆ. ನಾನು ಹೆಚ್ಚು ಸಮಯ ಸೆಟ್ ನಲ್ಲಿ ಇರುತ್ತಿದ್ದೆ. ಶಾಟ್ ಹಾಗೂ ನಿರ್ದೇಶನವನ್ನು ನೋಡುತ್ತಿದ್ದೆ. ನಮ್ಮೊಳಗೆ ಸ್ಕ್ರಿಪ್ಟ್ ನ ಚರ್ಚೆ ಆಗಿದೆ. ಮಾಧವನ್ ಉತ್ತಮವಾಗಿ ಮಾಡಿದ್ದಾರೆ” ಎಂದು ಮಾಜಿ ಏರೋಸ್ಕೋಪ್ ಎಂಜಿನಿಯರ್ ನುಡಿದಿದ್ದಾರೆ.

ನಟ ಶಾರುಖ್ ಖಾನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ತಮಿಳು ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದ್ದು ತೆಲುಗು ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಡಬ್ ಆಗಿದೆ.ಜುಲೈ 1ರಂದು ಚಿತ್ರ ರಿಲೀಸ್ ಆಗಲಿದೆ.