• April 13, 2022

ವಿಭಿನ್ನವಾಗಿ ತೆರೆ ಮೇಲೆ ಬರಲಿದ್ದಾರೆ ಈ ಹೊಸ ನಟ

ವಿಭಿನ್ನವಾಗಿ ತೆರೆ ಮೇಲೆ ಬರಲಿದ್ದಾರೆ ಈ ಹೊಸ ನಟ

ನಟ ಲಿಖಿತ್ ಶೆಟ್ಟಿ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ವಿನಾಯಕ ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ. ಹೆಸರಿಡದ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ.

ಈ ಚಿತ್ರದ ಕುರಿತು ಮಾತನಾಡಿರುವ ಲಿಖಿತ್ ” ನಾನು ವಿನಾಯಕ ಅವರ ಕೆಲಸದಿಂದ ಆಕರ್ಷಿತನಾದೆ. ಅವರು ಮೂರು ಕಿರು ಚಿತ್ರಗಳನ್ನು ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ನನ್ನ ಬಳಿ ಈ ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ತಂದಾಗ ನನ್ನ ಗಮನ ಸೆಳೆಯಿತು. ನನ್ನ ಹಿಂದಿನ ಫ್ಯಾಮಿಲಿ ಪ್ಯಾಕ್ ಹಾಗೂ ಸಂಕಷ್ಟ ಹರ ಗಣಪತಿ ಚಿತ್ರಗಳು ಇದೇ ರೀತಿಯ ಸಿನಿಮಾಗಳಾಗಿವೆ‌. ಜನ ನನ್ನನ್ನು ಈ ಪಾತ್ರದಲ್ಲಿ ಸ್ವೀಕರಿಸಿದ್ದಾರೆ. ಹೀಗಾಗಿ ಇದೇ ತರಹದ ಸಿನಿಮಾ ಮಾಡಲು ನನಗೆ ಯಾವುದೇ ಹಿಂಜರಿಕೆ ಇಲ್ಲ” ಎಂದಿದ್ದಾರೆ.

ತನ್ನ ಪಾತ್ರದ ಕುರಿತು ಮಾತನಾಡಿರುವ ಲಿಖಿತ್ “ನಾನು ಕ್ಯಾಂಡಿಡ್ ಫೋಟೋಗ್ರಾಫರ್ ಪಾತ್ರ ನಿರ್ವಹಿಸುತ್ತಿದ್ದೇನೆ. ನಾನಿಲ್ಲಿ ಮೊದಲ ಬಾರಿಗೆ ಮೂವರು ನಾಯಕಿಯರ ಜೊತೆ ನಟಿಸುತ್ತಿದ್ದೇನೆ. ಹೀಗಾಗಿ ಜನ ಹಾಸ್ಯವನ್ನು ನಿರೀಕ್ಷಿಸಬಹುದು. ಆಗಸ್ಟ್ ನಿಂದ ಶೂಟಿಂಗ್ ಆರಂಭವಾಗಲಿದೆ” ಎಂದಿದ್ದಾರೆ.

ಅಬಬ ಸಿನಿಮಾದಲ್ಲಿ ನಟಿ ಅಮೃತಾ ಅಯ್ಯಂಗಾರ್ ಜೊತೆ ಎರಡನೇ ಬಾರಿಗೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕೆ. ಎಂ ಚೈತನ್ಯ ನಿರ್ದೇಶಿಸಲಿದ್ದಾರೆ. ಲವ್ ಮದುವೆ ಇತ್ಯಾದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ನಿರ್ದೇಶಕ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.