• December 31, 2021

2ವರ್ಷದ ನಂತರ ಪ್ರೇಕ್ಷಕರ ಎದುರು ಬರಲಿದ್ದಾರೆ ವಿಜಯ್ ದೇವರಕೊಂಡ

2ವರ್ಷದ ನಂತರ ಪ್ರೇಕ್ಷಕರ ಎದುರು ಬರಲಿದ್ದಾರೆ ವಿಜಯ್ ದೇವರಕೊಂಡ

ಟಾಲಿವುಡ್ ನ ರೌಡಿ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ತೆರೆಗೆ ಬರಲು ಸಿದ್ಧವಾಗ್ತಿದೆ …ಕಳೆದ 2ವರ್ಷದಿಂದ ವಿಜಯ ದೇವರಕೊಂಡ ಅಭಿನಯದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ ..ಸದ್ಯ ಈಗ ಲೈಗರ್ ಸಿನಿಮಾ ತಂಡ ಹೊಸ ವರ್ಷಕ್ಕೆ ಟೀಂ ಕಡೆಯಿಂಗ್ ಬಿಗ್ ಸರ್ ಪ್ರೈಸ್ ನೀಡಲು ಮುಂದಾಗಿದ್ದಾರೆ‌.‌‌

ಲೈಗರ್​ ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು .ಲೈಗರ್​ ಸಿನಿಮಾಗೆ ಚಾರ್ಮಿ, ಕರಣ್​ ಜೋಹರ್ ಹಾಗೂ ಪೂರಿ ಜಗನ್ನಾಥ್​ ಹಣ ಹೂಡಿದ್ದಾರೆ…ನಟಿ ಅನನ್ಯಾ ಪಾಂಡೆ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ…

ಆಗಸ್ಟ್​ 25ಕ್ಕೆ ಲೈಗರ್​ ಸಿನಿಮಾ ತೆರೆಗೆ ಬರಲಿದೆ ..ಒಂದು ಕಡೆ ಶೂಟಿಂಗ್​​​ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಪ್ರಚಾರ ಕಾರ್ಯ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ…. ಹೀಗಾಗಿ, ಹೊಸ‌ವರ್ಷದ ಸಂಭ್ರಮದಲ್ಲಿ ಚಿತ್ರ ಮೂರು ಬಿಗ್​ ಅಪ್​ಡೇಟ್​ ನೀಡೋಕೆ ಚಿತ್ರತಂಡ ನಿರ್ಧಾರ ಮಾಡಿದೆ…

ಮೊದಲಿಗೆ ಚಿತ್ರತಂಡದಿಂದ ಸಿನಿಮಾ ಸ್ಟಿಲ್​ಗಳು​ ಲಾಂಚ್​ ಆಗುತ್ತಿದ್ದು ನಂತ್ರ ಚಿತ್ರದ ವಿಶೇಷ ಇನ್​ಸ್ಟಾ ಫಿಲ್ಟರ್​ ರಿಲೀಸ್​ ಮಾಡಲಾಗುತ್ತಿದೆ. ಡಿಸೆಂಬರ್ 31ರ ಸಂಜೆ ಚಿತ್ರತಂಡದಿಂದ ಲೈಗರ್​ ಚಿತ್ರದ ಮೊದಲ​ ಗ್ಲಿಂಪ್ಸ್​ ಬಿಡುಗಡೆ ಆಗುತ್ತಿದೆ….ಹೊಸವರ್ಷದ ಸಂಭ್ರಮದಲ್ಲಿ ವಿಜಯದೇವರಕೊಂಡ ಅಭಿಮಾನಿಗಳಿಗೆ ಇದು ಸರ್ಪ್ರೈಸ್ ಆಗಲಿದೆ …