• February 6, 2022

ಶಾಶ್ವತವಾಗಿ ಹಾಡುವುದನ್ನು ನಿಲ್ಲಿಸಿದ ಗಾನ ಕೋಗಿಲೆ

ಶಾಶ್ವತವಾಗಿ ಹಾಡುವುದನ್ನು ನಿಲ್ಲಿಸಿದ ಗಾನ ಕೋಗಿಲೆ

ಭಾರತಿಯ ಸಿನಿಮಾರಂಗದ ಗಾನಕೋಗಿಲೆ ಗಾಯಕಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ…ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಲತಾಮಂಗೇಶ್ವರ್ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು… ಸತತವಾಗಿ ಚಿಕಿತ್ಸೆ ಕೊಟ್ಟರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ

92 ವರ್ಷದ ಲತಾ ಮಂಗೇಶ್ಕರ್ ಅವರು ಭಾರತದ ಮೂವತ್ತಾರಕ್ಕೂ ಹೆಚ್ಚು ಭಾಷೆಯ ಹಾಡುಗಳನ್ನು ಹಾಡಿದ್ದಾರೆ ..ಅದಷ್ಟೇ ಅಲ್ಲದೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗಿದೆ ..

ಮಧ್ಯಪ್ರದೇಶದ ಇಂದೋರ್ ಜನಿಸಿದ ಲತಾ ಮಂಗೇಶ್ಕರ್ ಅವರು ಮನೆಯಲ್ಲೇ ಸಂಗೀತ ಕಲಿತರು ಅವರ ತಂದೆಯವರೇ ಅವರಿಗೆ ಮೊದಲ ಗುರುವಾಗಿದ್ದರು… ರಂಗಭೂಮಿಯಲ್ಲೂ ಗುರುತಿಸಿಕೊಂಡಿದ್ದ ಲತಾ ಮಂಗೇಶ್ಕರ್ 13ವಯಸ್ಸಿನಲ್ಲೇ ಹಾಡಲು ಶುರುಮಾಡಿದ್ರು