• February 10, 2022

ದಾಖಲೆ ಸೃಷ್ಟಿಸಿದ ಎಡವಟ್ಟು ರಾಣಿ… ಅದೇನು ಗೊತ್ತಾ?

ದಾಖಲೆ ಸೃಷ್ಟಿಸಿದ ಎಡವಟ್ಟು ರಾಣಿ… ಅದೇನು ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯನ್ನು ಇಷ್ಟಪಡದವರಿಲ್ಲ. ಎಡವಟ್ಟು ಲೀಲಾ ಹಾಗೂ ಪರ್ಫೆಕ್ಟ್ ಎಜೆ ಜೋಡಿ ಕಿರುತೆರೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಇಂತಿಪ್ಪ ಹಿಟ್ಲರ್ ಕಲ್ಯಾಣದ ಎಟವಟ್ಟು ಲೀಲಾ ಹೆಸರು ಮಲೈಕಾ ವಸುಪಾಲ್. ಮೂಲತಃ ದಾವಣಗೆರೆಯವರಾದ ಮಲೈಕಾ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಥಿಯೇಟರ್ ನಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಲೈಕಾ ಅವರ ನಟನಾ ಕೆರಿಯರ್ ಗೆ ಮನೆಯವರೆಲ್ಲರ ಪ್ರೋತ್ಸಾಹ ಇದೆ.

ದಾವಣಗೆರೆಯ ಬೆಡಗಿ ಹಲವು ಆಡಿಷನ್ ಗಳ ನಂತರ ಸೆಲೆಕ್ಟ್ ಆಗಿದ್ದು ಲೀಲಾ ಪಾತ್ರಕ್ಕೆ. ತನ್ನ ಮುದ್ದಾದ ಅಭಿನಯದಿಂದ ಜನರ ಮನಗೆದ್ದು ಫೇವರಿಟ್ ಅನಿಸಿಕೊಂಡರು ಮಲೈಕಾ. ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಮಲೈಕಾ ಸದಾ ತಮ್ಮ ಫೋಟೋಗಳನ್ನು ಹಂಚಿಕೊಂಡೇ ಇರುತ್ತಾರೆ. ಟ್ರಡಿಷನಲ್, ಮಾಡರ್ನ್ , ಕ್ಯಾಶುಯಲ್ ಹೀಗೆ ಎಲ್ಲಾ ರೀತಿಯ ಫೋಟೋಗಳಲ್ಲಿಯೂ ಸುರಸುಂದರಿಯಾ್ಇ ಕಂಗೊಳಿಸುವ ಎಟವಟ್ಟು ರಾಣಿಯ ಸೌಂದರ್ಯ ಕಂಡು ಅಭಿಮಾನಿಗಳು ಸೋತಿದ್ದಾರೆ.

ಇನ್ನು ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಚೆಂದುಳ್ಳಿ ಚೆಲುವೆ ಮಲೈಕಾ ಆಲಿಯಾಸ್ ಲೀಲಾ ಅವರಿಗಾಗಿ ಅಭಿಮಾನಿಗಳು ಪೇಜ್ ಕೂಡಾ ಆರಂಭಿಸಿದ್ದಾರೆ. ಹೌದು, ಈಗಾಗಲೇ ಹತ್ತು ಹದಿನೈದಕ್ಕೂ ಹೆಚ್ಚು ಫ್ಯಾನ್ ಪೇಜ್ ಗಳನ್ನು ಹೊಂದಿರುವ ಮಲೈಕಾ ಇನ್ನುಳಿದ ಕಿರುತೆರೆ ನಟಿಯರನ್ನು ಹಿಂದಿಕ್ಕಿದ್ದಾರೆ. ಒಟ್ಟಿನಲ್ಲಿ ಅಧಿಕ ಅಭಿಮಾನಿ ಪೇಜ್ ಗಳನ್ನು ಹೊಂದಿರುವಂತಹ ಕಿರುತೆರೆ ನಟಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ ಮಲೈಕಾ.