• April 2, 2022

ಟಾಲಿವುಡ್ ನ ಹ್ಯಾಂಡ್ ಸಮ್ ನಟನಿಗೆ ಜೋಡಿಯಾಗಲಿರುವ ನಟಿ ಇವರೇ ನೋಡಿ

ಟಾಲಿವುಡ್ ನ ಹ್ಯಾಂಡ್ ಸಮ್ ನಟನಿಗೆ ಜೋಡಿಯಾಗಲಿರುವ ನಟಿ ಇವರೇ ನೋಡಿ

ಟಾಲಿವುಡ್ ನ “ಉಪ್ಪೇನ” ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನಟಿ ಕೃತಿ ಶೆಟ್ಟಿ ಅವರಿಗೆ ನಂತರ ಹಲವು ಸಿನಿಮಾ ಆಫರ್ಸ್ ಗಳು ಬಂದಿದೆ. ಸದ್ಯ ಕೃತಿ ಕೈಯಲ್ಲಿ ಐದು ಚಿತ್ರಗಳು ಇವೆ. 18ನೇ ವಯಸ್ಸಿನಲ್ಲಿ ಸ್ಟಾರ್ ಪಟ್ಟ ಗಳಿಸಿರುವ ಕೃತಿ ಶೆಟ್ಟಿ ಈಗ ಕಾಲಿವುಡ್ ಪ್ರವೇಶಿಸುತ್ತಿದ್ದಾರೆ.

ಹೌದು, ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ಅವಕಾಶ ಪಡೆದುಕೊಳ್ಳುತ್ತಿರುವ ಕರಾವಳಿ ಮೂಲಕ ಕೃತಿಗೆ ಈಗ ತಮಿಳಿನ ಖ್ಯಾತ ನಟ ಸೂರ್ಯ ಅವರೊಂದಿಗೆ ನಟಿಸುವ ಅವಕಾಶ ದೊರಕಿದೆ.

ತಮಿಳಿನ ಖ್ಯಾತ ನಿರ್ದೇಶಕ ಬಾಲಾ ನಿರ್ದೇಶನದ “ಸೂರ್ಯ 41” ಚಿತ್ರದಲ್ಲಿ ನಾಯಕಿಯಾಗಿ ಕೃತಿ ಆಯ್ಕೆ ಆಗಿದ್ದಾರೆ. ಸೂರ್ಯ ಕೆರಿಯರ್ ನಲ್ಲಿ ಬಹು ನಿರೀಕ್ಷಿತ ಚಿತ್ರ ಇದಾಗಿರಲಿದ್ದು ಸೂರ್ಯ ಹಾಗೂ ಬಾಲಾ ಈ ಚಿತ್ರದ ಮೂಲಕ 20 ವರ್ಷಗಳ ನಂತರ ಸಿನಿಮಾ ಮಾಡುತ್ತಿದ್ದಾರೆ.

ಸೂರ್ಯ ಅವರಿಗೆ ನಾಯಕಿಯಾಗಿ ಯಾರು ನಟಿಸಬಹುದೆಂಬ ಕಾತರಕ್ಕೆ ಈಗ ತಂಡ ಫುಲ್ ಸ್ಟಾಪ್ ನೀಡಿದೆ. 2ಡಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು ಅಧಿಕೃತವಾಗಿ ನಾಯಕಿಯ ಕುರಿತಾದ ಮಾಹಿತಿ ಶೇರ್ ಮಾಡಿದೆ. “ಸೂರ್ಯ 41 ಚಿತ್ರಕ್ಕೆ ಸೌಂದರ್ಯವತಿ ಹಾಗೂ ಪ್ರತಿಭಾವಂತೆಯಾಗಿರುವ ಕೃತಿ ಶೆಟ್ಟಿ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗುತ್ತದೆ” ಎಂದು ಟ್ವೀಟ್ ಮಾಡಿದೆ.

ಈ ಚಿತ್ರದ ಶೂಟಿಂಗ್ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು ಸಿನಿಮಾಕ್ಕಾಗಿ ಅಲ್ಲಿ ಹಳ್ಳಿ ಸೆಟ್ ಅನ್ನು ನಿರ್ಮಿಸಲಾಗಿದೆ. ಇನ್ನು ನಟ ಸೂರ್ಯ ಅವರು ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸಲಿರುವುದು ವಿಶೇಷವಾದ ವಿಚಾರ.