• August 30, 2021

ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗೂಗ್ಲಿ ನಟಿ ಕೃತಿ ಕರಬಂಧ

ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗೂಗ್ಲಿ ನಟಿ ಕೃತಿ ಕರಬಂಧ

ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ.. ಆದರೆ ಕೆಲ ನಟಿಯರು ಅದ್ಯಾಕೆ ಈ ರೀತಿ ಗೊತ್ತಿದ್ದು ಗೊತ್ತಿದ್ದು ಎರಡನೇ ಪತ್ನಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೋ ತಿಳಿಯದು ಎನ್ನುತ್ತಿದ್ದಾರೆ ನೆಟ್ಟಿಗರು.. ಹೌದು ಅದಾಗಲೇ ಶಿಲ್ಪಾ ಶೆಟ್ಟಿ, ಪ್ರಿಯಾಮಣಿ ಸೇರಿದಂತೆ ಅನೇಕ‌ ನಟಿಯರು ಸಿರಿವಂತ ಉದ್ಯಮಿಗಳ ಬಾಳಿಗೆ ಬೆಳಕಾಗಿ ಎರಡನೇ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಆದರೆ ಇದೀಗ ನಟಿ ಕೃತಿ ಕರಬಂಧ ಅವರ ಸರದಿ.. ಹೌದು ಗೂಗ್ಲಿ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಕೃತಿ ಕರಬಂಧ ಇದೀಗ ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

ವಿಚಾರ ತಿಳಿದು ಬಹಳಷ್ಟು ಅಭಿಮಾನಿಗಳು ಶುಭಾಶಯ ತಿಳಿಸಿದರೆ ಮತ್ತಷ್ಟು ಮಂದಿ ಬೇರೆ ಹುಡುಗರೇ ಸಿಗಲಿಲ್ಲವಾ.. ಅದ್ಯಾಕೆ ಹೀಗೆ ನಟಿಯರು ಎರಡನೇ ಮದುವೆ ಆಗ್ತಾರೋ ಎನ್ನುತ್ತಿದ್ದಾರೆ.. ಹೌದು ಗೂಗ್ಲಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ ಕೃತಿ ಕರಬಂಧ ನಂತರ ಶಿವಣ್ಣ, ನೆನಪಿರಲಿ ಪ್ರೇಮ್, ಚಿರು ಸರ್ಜಾ, ಪ್ರೇಮ್ ಅವರ ಜೊತೆ ಅಭಿನಯಿಸಿದರು.. ಆದರೆ ಸುಂದರವಾಗಿದ್ದರೂ ಸಹ ನಂತರದ ದಿನಗಳಲ್ಲಿ ಅದ್ಯಾಕೋ ಸ್ಯಾಂಡಲ್ವುಡ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.. ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡರು.. ಆದರೆ ಸ್ಯಾಂಡಲ್ವುಡ್ ಪ್ರೇಕ್ಷಕರು ಅದೆಷ್ಟೋ ಜನರಿಗೆ ಈಗಲೂ ಗೂಗ್ಲಿಯ ಸ್ವಾತಿಯೇ ಕ್ರಶ್ ಎನ್ನಬಹುದು..

ಇನ್ನು ಮೂವತ್ತು ವರ್ಷ ವಯಸ್ಸಿನ ಕೃತಿ‌ಕರಬಂಧ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ.. ಹೌದು ಬಾಲಿವುಡ್ ನ ಖ್ಯಾತ ನಟನ ಜೊತೆ ಎರಡನೇ ಮದುವೆಯಾಗುತ್ತಿದ್ದು ಸಧ್ಯದಲ್ಲಿಯೇ ಮದುವೆ ಸಮಾರಂಭ ನೆರವೇರಲಿದೆ.. ಹೌದು ಅದಾಗಲೇ ಅನೇಕ ಕನ್ನಡ ಹಾಗೂ ಇನ್ನಿತರ ಬಾಷೆಗಳ ನಟಿಯರು ಸ್ಟಾರ್‌ ಗಳಿಗೆ ಉದ್ಯಮಿಗಳಿಗೆ ಎರಡನೇ ಪತ್ನಿಯಾಗಿ ಹೋಗಿ ನಂತರ ಕೆಲರು ಯಶಸ್ವಿಯಾಗಿ ಸಂಸಾರ ನಡೆಸಿದರೆ ಮತ್ತೆ ಕೆಲವರು ಮನಸ್ತಾಪಗಳಿಂದ ದೂರಾದ ಉದಾಹರಣೆಗಳು ಇವೆ. ಸಧ್ಯ ಮೊನ್ನೆಮೊನ್ನೆಯಷ್ಟೇ ನಟಿ ಶಿಲ್ಪಾ ಶೆಟ್ಟಿ ಸಹ ತನ್ನ ಮದುವೆ ನಡೆದ ಸಮಯದ ಬಗ್ಗೆ ವಿವರಿಸಿದ್ದರು. ತಮಗೆ ಇಷ್ಟವಿಲ್ಲದಿದ್ದರೂ ರಾಜ್‌ ಕುಂದ್ರಾ ನನ್ನನ್ನು ಪ್ರೀತಿಸಿ ಮದುವೆಯಾದರು ಎಂದಿದ್ದರು.. ಇದೀಗ ಕೃತಿ ಕರಬಂಧ ಸಹ ಬಾಲಿವುಡ್‌ ನಟ ಒಬ್ಬರನ್ನು ಪ್ರೀತಿ ಎರಡನೇ ಮದುವೆಯಾಗುತ್ತಿದ್ದಾರೆ.

ಇನ್ನು ಕೃತಿ‌ಕರಬಂಧ ಮದುವೆಯಾಗುತ್ತಿರುವ ಆ ನಟ ಮತ್ಯಾರೂ ಅಲ್ಲ.. ಪುಲ್ಕಿತ್ ಸಾಮ್ರಾಟ್.. ಹೌದು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಈ ಹಿಂದೆ ಸಿನಿಮಾವೊಂದರಲ್ಲಿ ಕೃತಿ ಅಭಿನಯಿಸಿದ್ದರು.. ಆ ಸಮಯದಲ್ಲಿಯೇ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿ ಪ್ರೀತಿಗೆ ತಿರುಗಿದೆ. ಆದರೆ ವಿಚಿತ್ರ ಎಂದರೆ ಅದಾಗಲೇ ಪುಲ್ಕಿತ್ ಸಾಮ್ರಾಟ್ ಮದುವೆಯಾಗಿದ್ದರು.. ಹೌದು ಅದಾಗಲೇ ಒಂದು ಮದುವೆಯಾಗಿರುವ ನಟ ಪುಲ್ಕಿತ್ ಸಾಮ್ರಾಟ್ ಕಾನೂನಿನ ಮೂಲಕ‌ ಮೊದಲ ಹೆಂಡತಿಯಿಂದ ದೂರವಾಗಿದ್ದು ಕೃತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ತನ್ನ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಆತ್ಮೀಯವಾಗಿರುವ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಕೃತಿ ತಮ್ಮ ಪ್ರೀತಿಗ ವಿಚಾರವನ್ನು ಅದಾಗಲೇ ಬಹಿರಂಗಪಡಿಸಿದ್ದಾರೆ.. ಯಾವುದೇ ಕಾರ್ಯಕ್ರಮವಾಗಲಿ ಸಮಾರಂಭವಾಗಲಿ ಸಿನಿಮಾ ಸಂಬಧಿತ ಸಮಾರಂಭಗಳಲ್ಲಿ‌ ಸದಾ ಒಟ್ಟಾಗಿಯೇ ಕಾಣಿಸಿಕೊಳ್ಳುವ ಜೋಡಿ ಇದೀಗ ಮದುವೆಯ ನಿರ್ಧಾರ ಮಾಡಿದೆ.. ಹೌದು ಮೂವತ್ತೇಳು ವರ್ಷದ ಪುಲ್ಕಿತ್ ಸಾಮ್ರಾಟ್ ಜೊತೆ ಮೂವತ್ತು ವರ್ಷದ ನಟಿ ಕೃತಿ ಕರಬಂಧ ಸಧ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..