• April 12, 2022

ನನ್ನ ಬದುಕಿನ ಬಲಶಾಲಿ ಮಹಿಳೆ ಅಮ್ಮ ಎಂದ ಕಿರಿಕ್ ಹುಡುಗಿ

ನನ್ನ ಬದುಕಿನ ಬಲಶಾಲಿ ಮಹಿಳೆ ಅಮ್ಮ ಎಂದ ಕಿರಿಕ್ ಹುಡುಗಿ

ಕಿರಿಕ್ ಪಾರ್ಟಿಯ ಆರ್ಯ ಆಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಹೆಗ್ಡೆ ಕನ್ನಡದ ಜೊತೆಗೆ ತಮಿಳು, ತೆಲುಗು ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಿದ ಪ್ರತಿಭೆ. ನಟಿ ಸಂಯುಕ್ತ ಹೆಗ್ಡೆ ತಮ್ಮ ತಾಯಿಯ ಜನ್ಮದಿನಕ್ಕೆ ಶುಭ ಹಾರೈಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

“ನಾನು ಬದುಕಿನಲ್ಲಿ ತುಂಬಾ ಪ್ರೀತಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಸಂಭ್ರಮ. ಹ್ಯಾಪಿ 60 ಅಮ್ಮ. ನನಗೆ ಗೊತ್ತು ನೀವು ನಿಮ್ಮ ಬರ್ತ್ ಡೇ ಆಚರಿಸುವುದಿಲ್ಲ. ಆದರೆ ನಾನು ನಿಮ್ಮ 60 ವರ್ಷಗಳನ್ನು ಆಚರಿಸುತ್ತೇನೆ. ನೀವು ನನ್ನ ಬದುಕಿನ ಬಲಶಾಲಿ ಮಹಿಳೆ” ಎಂದು ಹೇಳಿದ್ದಾರೆ ಸಂಯುಕ್ತಾ ಹೆಗ್ಡೆ.

“ಅಮ್ಮಾ ನೀನಿಲ್ಲದೇ ನಾನು ಏನೂ ಅಲ್ಲ. ಬದುಕು ನಮ್ಮ ಕುಟುಂಬಕ್ಕೆ ಹಲವು ಕಷ್ಟಗಳನ್ನು ನೀಡಿದೆ ಆದರೆ ದೇವರು ನಮಗೆ ಈ ಪಯಣದಲ್ಲಿ ಉತ್ಸಾಹ ತುಂಬಲು ನಿನ್ನನ್ನು ಕೊಟ್ಟಿದ್ದಾನೆ. ನಾನು ಇದಕ್ಕೆ ಧನ್ಯವಾದ ಹೇಳುತ್ತೇನೆ. ನೀನು ನನ್ನ ಸ್ಪೂರ್ತಿ, ನನ್ನ ಆಪ್ತ ಸ್ನೇಹಿತೆ, ನನ್ನ ಸಂಗಾತಿ, ನನ್ನ ದೊಡ್ಡ ಅಭಿಮಾನಿ, ನನ್ನ ಪ್ರೋತ್ಸಾಹಕಿ, ನೀನಿಲ್ಲದೇ ನನ್ನ ಬದುಕನ್ನು ಕಲ್ಪನೆ ಮಾಡಿಕೊಳ್ಳಲು ಬಯಸುವುದಿಲ್ಲ ಅಮ್ಮ. ಲವ್ ಯೂ ಅಮ್ಮ ” ಎಂದು ಬರೆದುಕೊಂಡಿದ್ದಾರೆ.

ಇನ್ನು ತಮಿಳಿನಲ್ಲಿ ಸಂಯುಕ್ತ ಅವರು ನಟಿಸಿರುವ ಮನ್ಮಥ ಲೀಲೈ ಚಿತ್ರ ರಿಲೀಸ್ ಆಗಿ ಉತ್ತಮ ಪ್ರಶಂಸೆ ಗಳಿಸುತ್ತಿದೆ. ಇದರ ಜೊತೆಗೆ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.