• April 8, 2022

ನಮ್ಮದು ಬರೀ ಸೀರಿಯಲ್ ಪಾತ್ರಗಳಷ್ಟೇ..ನಿಜಜೀವನಕ್ಕೆ ಕನೆಕ್ಟ್ ಮಾಡಬೇಡಿ ಎಂದ ಕಿರಣ್ ರಾಜ್

ನಮ್ಮದು ಬರೀ ಸೀರಿಯಲ್ ಪಾತ್ರಗಳಷ್ಟೇ..ನಿಜಜೀವನಕ್ಕೆ ಕನೆಕ್ಟ್ ಮಾಡಬೇಡಿ ಎಂದ ಕಿರಣ್ ರಾಜ್

ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುಖ್ಯವಾದ ವಿಷಯ ಹಂಚಿಕೊಂಡಿದ್ದಾರೆ. ತನ್ನ ಅಭಿಮಾನಿಗಳಿಗೆ ರಂಜಿನಿ ರಾಘವನ್ ಜೊತೆ ತನ್ನನ್ನು ಜೋಡಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ತನ್ನ ಇನ್ಸಾಗ್ರಾಂ ಸ್ಟೋರಿಯಲ್ಲಿ ” ಹರ್ಷ ಹಾಗೂ ಭುವಿ ಸೀರಿಯಲ್ ಪಾತ್ರಗಳಷ್ಟೇ. ಇದನ್ನು ನಿಜಜೀವನಕ್ಕೆ ಕನೆಕ್ಟ್ ಮಾಡಬೇಡಿ” ಎಂದು ಬರೆದುಕೊಂಡಿದ್ದರು.

ನಟ ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಕಟ್ಟುನಿಟ್ಟಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಹರ್ಷ ಹಾಗೂ ಭುವಿ ಜೋಡಿ ಕಿರುತೆರೆಯಲ್ಲಿ ಜನ ಪ್ರೀತಿಸುವ ಜೋಡಿಯೂ ಹೌದು‌. ಕಡಿಮೆ ಸಮಯದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜೋಡಿಗಳ ಪೈಕಿ ಹರ್ಷ ಹಾಗೂ ಭುವಿಯ ಜೋಡಿಯೂ ಒಂದು.

ತಮ್ಮ ಆನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಮಾತನಾಡಿರುವ ಹರ್ಷ ಹಾಗೂ ಭುವಿ ” ನಮ್ಮ ಆನ್ ಸ್ಕ್ರೀನ್ ಪಾತ್ರಗಳು ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದೆ. ಯುವಕರು , ಮಧ್ಯಮ ವಯಸ್ಕರು, ಹಿರಿಯರೆಲ್ಲರೂ ನಮ್ಮನ್ನು ತೆರೆ ಮೇಲೆ ಇಷ್ಟ ಪಟ್ಟಿದ್ದಾರೆ. ನಮ್ಮನ್ನು ಒಟ್ಟಿಗೆ ನೋಡಲು ಜನ ಇಷ್ಟ ಪಡುತ್ತಾರೆ. ನಮ್ಮ ಆನ್ ಸ್ಕ್ರೀನ್ ಪಾತ್ರಗಳನ್ನು ರೀಲ್ ಲೈಫ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಇಷ್ಟ ಪಟ್ಟಿದ್ದಾರೆ” ಎಂದಿದ್ದಾರೆ.