• March 23, 2022

ತಂತ್ರಜ್ಞರಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಬಡ್ಡೀಸ್ ಸಿನಿಮಾ ತಂಡ.. ವಿಶೇಷತೆ ಏನು ಗೊತ್ತಾ?

ತಂತ್ರಜ್ಞರಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಬಡ್ಡೀಸ್ ಸಿನಿಮಾ ತಂಡ.. ವಿಶೇಷತೆ ಏನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕಿರಣ್ ರಾಜ್ ಅವರ ಭರ್ಜರಿ ಗಂಡು ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಇನ್ನು ಭರ್ಜರಿ ಗಂಡು ಸಿನಿಮಾದ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು.

ಇದೀಗ ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಬಡ್ಡೀಸ್ ಸಿನಿಮಾದ ಶೂಟಿಂಗ್ ಕೂಡಾ ಮುಕ್ತಾಯವಾಗಿದೆ. ಮೇ ತಿಂಗಳಿನಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಅದರಲ್ಲಿ ತಂತ್ರಜ್ಞರಿಗೆ ಮನ್ನಣೆ ನೀಡಿರುವುದು ವಿಶೇಷ.

ಸಿನಿಮಾ ಪೋಸ್ಟರ್‌ ಎಂದ ಮೇಲೆ ಅದರಲ್ಲಿ ಹೀರೋ ಅಥವಾ ಹೀರೋಯಿನ್ ಫೋಟೋ ಇರುವುದು ಮಾಮೂಲಿ. ಆದರೆ ಬಡ್ಡೀಸ್ ಸಿನಿಮಾದ ಪೋಸ್ಟರ್ ಕೊಂಚ ಭಿನ್ನವಾಗಿದೆ. ಹೌದು, ಬಡ್ಡೀಸ್ ಸಿನಿಮಾ ತಂಡವು ತಂತ್ರಜ್ಞರಿಗಾಗಿಯೇ ಪೋಸ್ಟರ್‌ ಬಿಡುಗಡೆ ಮಾಡಿದೆ.

ಪೋಸ್ಟರ್ ನಲ್ಲಿನಿರ್ದೇಶಕ ಗುರುತೇಜ್ ಶೆಟ್ಟಿ, ನಿರ್ಮಾಪಕಿ ಭಾರತಿ ಶೆಟ್ಟಿ, ಛಾಯಾಗ್ರಾಹಕಿ ನಿಭಾ ಶೆಟ್ಟಿ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಪಿಆರ್‌ಓ ವೆಂಕಟೇಶ್, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಸಂಕಲನಕಾರ ಕೆ.ಎಂ. ಪ್ರಕಾಶ್ ಹೀಗೆ ಅನೇಕ ತಂತ್ರಜ್ಞರ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಈ ಫೋಸ್ಟರ್ ಗಾಗಿ ವಿಭಿನ್ನ ರೀತಿಯ ಫೋಟೋಶೂಟ್ ಕೂಡ ಚಿತ್ರತಂಡ ಮಾಡಿಸಿದ್ದಾರೆ.