• November 27, 2021

ರವಿಚಂದ್ರನ್ ಲುಕ್ ಬದಲಾಯಿಸಿದ ಕಿಚ್ಚ ಸುದೀಪ್ !

ದೃಶ್ಯ 2 ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ…ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ದೃಶ್ಯ2 ಟ್ರೈಲರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..

ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ …ದೃಶ್ಯ ಸಿನಿಮಾವನ್ನ ಮಲೆಯಾಳಂ ತೆಲುಗು ನಲ್ಲಿ ನೋಡಿಲ್ಲ ಮೊದಲು ನೋಡಿದ್ದು ಕನ್ನಡದಲ್ಲೇ..ಈಗ ದೃಶ್ಯ 2 ಬರ್ತಾ ಇದೆ
ಸಿನಿಮಾದಲ್ಲಿ ಅದ್ಭುತ ಕಲಾವಿಧರು ಇರುವಾಗ ಸಿನಿಮಾ ಚನ್ನಾಗಿ ಮೂಡಿ ಬಂದಿದೆ ಅನ್ನೋದ್ರಲ್ಲಿ ಡೌಟೆ ಇಲ್ಲ..ನನ್ನ ಹೆಂಡತಿ ಮಲೆಯಾಳಿ, ಬಟ್ ನನಗೆ ಮಲೆಯಾಳಂ ಬರಲ್ಲಾ..ಅವರು ಮಲೆಯಾಳಂ ಸಿನಿಮಾಗಳನ್ನ ನೋಡುತ್ತಿರುತ್ತಾಳೆ. ಚೆನ್ನಾಗಿರೋದನ್ನ ಹೇಳುತ್ತಾಳೆ..ದೃಶ್ಯ ಒಂದು ದೃಶ್ಯ ಎರಡಾಯ್ತು,ಆದ್ರೆ ದೃಶ್ಯ ಮೂರು ಕನ್ನಡದಲ್ಲಿ ಆಗಲಿ….ದೃಶ್ಯ ಚಿತ್ರದ‌ ಬಗ್ಗೆ ಮಾಣಿಕ್ಯ ಸಿನಿಮಾ ಶೂಟಿಂಗ್ ನಲ್ಲಿ ಚರ್ಚೆ ಮಾಡಿದ್ವಿ ಎಂದ್ರು…

ಇನ್ನು ಕಿಚ್ಚನ ಬಗ್ಗೆ ಮಾತನಾಡಿದ ರವಿಚಂದ್ರನ್ ..ನಾನು ಇಂದು ನನ್ನ ಅಪ್ಪನ ಪ್ರೀತಿನಾ , ಅಪ್ಪು ನಗುವನ್ನ ನೆನೆಸಿಕೊಂಡು ಮಾತು ಪ್ರಾರಂಭಿಸುತ್ತೇನೆ”..ಇಂದು ನನ್ನ ಮಗನಿಗಾಗಿ ರಿಸೀವ್ ಮಾಡುಲು ನಾನೇ ಹೋದೆ…ನನ್ನ ದೊಡ್ಡಮಗ ಅಂದ್ರೆ ಯಾವಾಗಲು ಲವ್ ನನಗೆ..ಸುದೀಪ್ ನನಗೆ ವಿಶೇಷ…
ನನ್ನ ಲುಕ್ ಚೆಂಜ್ ಆಗಲು ಕಾರಣ ನನ್ನ ಮಗ ಮಾಡಿದ್ದ ಮಾಣಿಕ್ಯ ಎಂದ್ರು….

E4 Entertainment ಬ್ಯಾನರ್​ನಲ್ಲಿ ಸಿನಿಮಾ ಮೂಡಿಬಂದಿದೆ. ರವಿಚಂದ್ರನ್ ಸೇರಿದಂತೆ.ನವ್ಯ ನಾಯರ್, ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ.‌ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ…