• May 17, 2022

ಸುಶಾಂತ್ ಸಿಂಗ್ ರನ್ನು ನೆನಪಿಸಿಕೊಂಡ ಕಿಯಾರಾ

ಸುಶಾಂತ್ ಸಿಂಗ್ ರನ್ನು ನೆನಪಿಸಿಕೊಂಡ ಕಿಯಾರಾ

ಭೂಲ್ ಭುಲಯ್ಯ 2 ಚಿತ್ರದ ಪ್ರಚಾರದಲ್ಲಿ ತೊಡಗಿರುವ ಕಿಯಾರಾ ಅದ್ವಾನಿ ಅವರಿಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ವಿಚಾರ ಹಂಚಿಕೊಳ್ಳುವಂತೆ ಪ್ರಶ್ನೆ ಎದುರಾಗಿದೆ.

ಕಿಯಾರಾ ಔರಂಗಾಬಾದ್ ನಲ್ಲಿ ಶೂಟಿಂಗ್ ಮುಗಿಸಿದ ನಂತರ ಮರುದಿನ ಬೆಳಿಗ್ಗೆ ವಿಮಾನ ಇದ್ದುದರಿಂದ ರಾತ್ರಿ ಎಲ್ಲಾ ಎಚ್ಚರವಾಗಿರಲು ಬಯಸಿದರು. ಈ ಸಮಯದಲ್ಲಿ ಸುಶಾಂತ್ ಸಿಂಗ್ ಜೊತೆಗಿನ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. ಧೋನಿ ಸಿನಿಮಾ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಕಿಯಾರಾ ಹೇಳಿಕೊಂಡಿದ್ದಾರೆ.

ಪ್ರೀತಿ ಜಿಂಟಾ ಅವರೊಂದಿಗೆ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದ ಕಿಯಾರಾ ಇದೀಗ ನಟನೆಯಲ್ಲಿ ಬ್ಯುಸಿ. ತಮ್ಮ ಇಂಜಿನಿಯರಿಂಗ್ ಬದುಕಿನ ಕುರಿತು ಹೇಳಿದ್ದ ಈಕೆ ಮುಖ್ಯವಾಗಿ ಸುಶಾಂತ್ ಬದುಕು ಹಾಗೂ ಜನರ ಬಗ್ಗೆ ಕುತೂಹಲ ಹೊಂದಿದೆ ಎಂಬುದನ್ನು ಹೇಳಿದ್ದಾರೆ.

ಅವರ ಪಯಣವನ್ನು ಕೇಳಿದ ನಂತರ ಕಿಯಾರಾ ಸುಶಾಂತ್ ಬಳಿ ನಿಮ್ಮ ಬದುಕಿನ ಕುರಿತು ಯಾರಾದರೂ ಬಯೋಪಿಕ್ ಮಾಡುತ್ತಾರೆ. ನಿಮ್ಮ ಪಯಣ ಆಸಕ್ತಿ ದಾಯಕವಾಗಿದೆ ಎಂದಿದ್ದರಂತೆ.

ಭೂಲ್ ಭುಲಯ್ಯ 2 ಚಿತ್ರವನ್ನು ಅನೀಸ್ ಬಝ್ಮೀ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ,ಟಬು ,ರಾಜ್ ಪಾಲ್ ಯಾದವ್ ಮುಂತಾದ ಕಲಾವಿದರು ನಟಿಸಿದ್ದಾರೆ.