• February 1, 2022

ಕೆಜಿಎಫ್ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್

ಕೆಜಿಎಫ್ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ..ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಎರಡು ಭಾರಿ ಮುಂದೂಡಲಾಗಿತ್ತು…ಆದರೆ ಈಗ ಚಿತ್ರತಂಡ ಸದ್ಯ ಅನೌನ್ಸ್ ಮಾಡಿರುವಂತೆ ಏಪ್ರಿಲ್ 14 ಕ್ಕೆ ಬಿಡುಗಡೆ ಮಾಡಿಯೇ ಸಿದ್ಧ ಎಂದು ನಿರ್ಧಾರ ಮಾಡಿದೆ …

ಅದಕ್ಕಾಗಿ ಈಗಾಗಲೇ ಕುಂದಾಪುರದಲ್ಲಿ ಬೀಡುಬಿಟ್ಟಿರುವ ಕೆಜಿಎಫ್ ತಂಡ ಪ್ರಚಾರದ ಪ್ಲಾನ್ ರೆಡಿ ಮಾಡುತ್ತಿದೆ… ಇಂದಿನಿಂದ ಸಿನಿಮಾ ಪ್ರಚಾರ ಆರಂಭ ಮಾಡಲು ತಯಾರಿ ಮಾಡಿಕೊಂಡಿದ್ದು ಅದಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಮಾಡುವ ಮೂಲಕ ಸಿನಿಮಾ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದೆ ..

ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ,ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸೇರಿದಂತೆ ಇಡೀ ತಂಡ ಆನೆಗುಂದಿ ಗಣೇಶ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವರ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದ್ದಾರೆ …