• February 6, 2022

ಟೆಂಪಲ್ ರನ್ ನಲ್ಲಿ ಬ್ಯುಸಿಯಾದ ಕೆಜಿಎಫ್ ತಂಡ

ಟೆಂಪಲ್ ರನ್ ನಲ್ಲಿ ಬ್ಯುಸಿಯಾದ ಕೆಜಿಎಫ್ ತಂಡ

ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ… ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಆಗಲು ಈಗಾಗಲೇ ದಿನಾಂಕ ಅನೌನ್ಸ್ ಆಗಿದ್ದು…ಸಿನಿಮಾತಂಡ ಪ್ರಚಾರಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ…

ಕರೋನಾದಿಂದಾಗಿ ಬಿಡುಗಡೆ ತಡವಾಗಿದ್ದು ಕೆಜಿಎಫ್ ಚಾಪ್ಟರ್ 2 ಸಿನೆಮಾವನ್ನು ಈ ಬಾರಿ ಭರ್ಜರಿ ಪ್ರಚಾರದ ಮೂಲಕ ಪ್ರೇಕ್ಷಕರ ಮುಂದೆ ತರಲು ಸಿನಿಮಾತಂಡ ನಿರ್ಧಾರ ಮಾಡಿದೆ… ಈಗಾಗಲೇ ಕರಾವಳಿ ಭಾಗದ ದೇವಾಲಯಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿರುವ ಚಿತ್ರತಂಡ ಇಂದು ಕೂಡ ಸಾಕಷ್ಟು ದೇವಾಲಯಗಳಿಗೆ ಭೇಟಿ ಮಾಡಿದೆ…

ನಟ ಯಶ್ ನಿರ್ಮಾಪಕ ವಿಜಯ್ ಕಿರಗಂದೂರ್ ಸೇರಿದಂತೆ ಚಿತ್ರತಂಡದ ಅನೇಕ ತಂತ್ರಜ್ಞರು ಸೇರಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ..ಸದ್ಯ ಉಡುಪಿಯ ಕೃಷ್ಣಮಠ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ…