• April 20, 2022

ಕೆಜಿಎಫ್ 2 ಮೋಡಿ ಮಾಡಿದ ರಾಕಿ ಭಾಯ್

ಕೆಜಿಎಫ್ 2 ಮೋಡಿ ಮಾಡಿದ ರಾಕಿ ಭಾಯ್

ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಹವಾ ಎಬ್ಬಿಸಿದೆ. ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿರುವ ಈ ಚಿತ್ರದಿಂದ ಯಶ್ ಅವರಿಗೂ ಬೇಡಿಕೆ ಹೆಚ್ಚಿದೆ. ಜಾಹೀರಾತುಗಳಲ್ಲಿ ನಟಿಸಲು ಆಫರ್ಸ್ ಬರುತ್ತಿವೆ. ಈ ಮಧ್ಯೆ ಹಾಲಿನ ಉತ್ಪನ್ನಗಳನ್ನು ಹಾಗೂ ಐಸ್ ಕ್ರೀಮ್ ಮಾರಾಟ ಮಾಡುವ ಅಮೂಲ್ ಕಂಪೆನಿ ಕೆಜಿಎಫ್ ಸಿನಿಮಾ ಶೈಲಿಯಲ್ಲಿ ಜಾಹೀರಾತು ಮಾಡಿದ್ದು ಇದು ಈಗ ವೈರಲ್ ಆಗುತ್ತಿದೆ.

ಅಮೂಲ್ ತನ್ನ ಪ್ರೊಡಕ್ಟ್ ಗಳ ಮಾರಾಟಕ್ಕೆ ಹಲವು ತಂತ್ರಗಳನ್ನು ಬಳಸುತ್ತದೆ. ಟ್ರೆಂಡ್ ಗೆ ತಕ್ಕಂತೆ ಜಾಹೀರಾತು ಸಿದ್ಧಪಡಿಸುತ್ತದೆ. ಕ್ರೀಡೆ, ಸಿನಿಮಾ,ರಾಜಕೀಯ ವಲಯದಲ್ಲಿ ಆಗಿರುವ ಪ್ರಮುಖ ಬೆಳವಣಿಗೆಯನ್ನು ಉಪಯೋಗಿಸಿಕೊಳ್ಳುತ್ತದೆ. ಈಗ ಸದ್ಯಕ್ಕೆ ಟ್ರೆಂಡ್ ಆಗಿರುವ ಕೆಜಿಎಫ್ 2 ಚಿತ್ರವನ್ನು ಇಟ್ಟುಕೊಂಡು ಜಾಹೀರಾತು ಮಾಡಿದೆ.

ಕೆಜಿಎಫ್ ನಲ್ಲಿ ರಾಕಿ ಬಾಯ್ ಚಿನ್ನಕ್ಕಾಗಿ ಏನು ಮಾಡೋಕೂ ಸೈ ಇರುತ್ತಾನೆ. ಚಿನ್ನದ ಗಟ್ಟಿಗಾಗಿ ಕೋಲಾರದಿಂದ ಬೆಂಗಳೂರಿಗೆ ಬರುತ್ತಾನೆ. ಗಟ್ಟಿಯನ್ನು ತೆಗೆದುಕೊಂಡು ಹೋಗುತ್ತಾನೆ. ಇದೇ ಮಾದರಿಯಲ್ಲಿ ಪೋಸ್ಟ್ ಮಾಡಿದೆ ಅಮೂಲ್. ಬೈಕ್ ಮೇಲೆ ರಾಕಿ ಕುಳಿತಿದ್ದಾನೆ. ಅವನ ಕೈಯಲ್ಲಿ ಬ್ರೆಡ್ ಇದೆ. ಕೂಲರ್ ನಲ್ಲಿ ಗೋಲ್ಡ್ ಇಡಿ ಎಂದು ಎಂದು ಬರೆಯಲಾಗಿದ್ದು ಇದನ್ನು 900 ಮಂದಿ ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳು ಬಂದು ಹೋದರೂ ಅಮೂಲ್ ಯಾವ ಸಿನಿಮಾಗಳ ಪಾತ್ರವನ್ನು ಜಾಹೀರಾತಿನಲ್ಲಿ ಬಳಸಿಕೊಂಡಿರಲಿಲ್ಲ. ಆದರೆ ರಾಕಿ ಬಾಯ್ ಪಾತ್ರವನ್ನು ಬಳಸಿಕೊಂಡಿದೆ. ಕೆಜಿಎಫ್ 2 ಚಿತ್ರ ಎಷ್ಟು ಮೋಡಿ ಮಾಡಿದೆ ಎಂದು ತಿಳಿಯುತ್ತದೆ.

ವಿಶ್ವಮಟ್ಟದಲ್ಲಿ 500 ಕೋಟಿ ಗಳಿ‌ಸಿರುವ ಕೆಜಿಎಫ್ ಚಿತ್ರ ಕನ್ನಡದ ಕೀರ್ತಿ ಹೆಚ್ಚಿಸಿದೆ.