• May 6, 2022

ಸೀಕ್ವೆಲ್ ಗೆ ಕಾಯುತ್ತಿದ್ದಾರೆ ಶ್ರೀನಿಧಿ ಶೆಟ್ಟಿ

ಸೀಕ್ವೆಲ್ ಗೆ ಕಾಯುತ್ತಿದ್ದಾರೆ ಶ್ರೀನಿಧಿ ಶೆಟ್ಟಿ

ಕೆಜಿಎಫ್ 2 ಯಶಸ್ಸಿನಲ್ಲಿ ಇರುವ ನಟಿ ಶ್ರೀನಿಧಿ ಶೆಟ್ಟಿ ಈಗ ಎಲ್ಲಾ ಭಾಷೆಗಳ ಅಭಿಮಾನಿಗಳನ್ನು ಹೊಂದಿದ್ದಾರೆ. ರೀನಾ ದೇಸಾಯಿ ಪಾತ್ರದಿಂದ ಕೇರಳದಲ್ಲಿಯೂ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಶ್ರೀನಿಧಿ ಮೋಹನ್ ಲಾಲ್ ಅವರ ಲೂಸಿಫರ್ ಚಿತ್ರದ ಅಭಿಮಾನಿ ಆಗಿದ್ದು ಈ ಚಿತ್ರದ ಸೀಕ್ವೆಲ್ ಎಂಪುರಾನ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

ಮೋಹನ್ ಲಾಲ್ ಅವರ ಲೂಸಿಫರ್ ಚಿತ್ರವನ್ನು ಪರದೆ ಮೇಲೆ ನೋಡಿದ ತಕ್ಷಣ ಆ ಸಿನಿಮಾ ಅವರಿಗೆ ಇಷ್ಟ ಆಯಿತು. ಕೆಜಿಎಫ್ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ನಟ ಪೃಥ್ವಿ ರಾಜ್ ಅವರನ್ನು ಭೇಟಿಯಾದಾಗ ಲೂಸಿಫರ್ ಚಿತ್ರದ ಸೀಕ್ವೆಲ್ ನ್ನು ರಿಲೀಸ್ ಮಾಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಪೃಥ್ವಿ ರಾಜ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ ಎಂದಿದ್ದರು.

ಪೃಥ್ವಿ ರಾಜ್ ಪ್ರೀತಿಯ ಮನುಷ್ಯ ಎಂದಿದ್ದಾರೆ ಶ್ರೀನಿಧಿ. ದುಲ್ಕರ್ ಸಲ್ಮಾನ್ ಅವರ ಚಾರ್ಲಿ ಸಿನಿಮಾ ವೀಕ್ಷಿಸಿದ ಬಳಿಕ ತನ್ನ ಹಾಸ್ಟೆಲ್ ನ ಸ್ನೇಹಿತರಿಗೂ ಈ ಸಿನಿಮಾ ನೋಡುವಂತೆ ಶ್ರೀನಿಧಿ ಹೇಳಿದ್ದರು. ಒಟ್ಟಿನಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುವ ಮಲೆಯಾಳಂ ಚಿತ್ರರಂಗವನ್ನು ಶ್ರೀನಿಧಿ ಇಷ್ಟಪಡುತ್ತಾರೆ.