- April 20, 2022
ದಾಖಲೆಗಳನ್ನೆಲ್ಲ ಧ್ವಂಸಗೊಳಿಸುತ್ತಿದೆ ಕೆಜಿಎಫ್ ಚಾಪ್ಟರ್ 2


“ಇದಿನ್ನು ಆರಂಭ, ಕಥೆ ಈಗ ಶುರುವಾಗ್ತಿದೆ” ಎಂದು ಕುತೂಹಲ ಹುಟ್ಟಿಸಿ ಕೊನೆಯಾಗಿತ್ತು ಕೆಜಿಎಫ್ ಚಾಪ್ಟರ್ 1. ಆ ಮಾತು ಪ್ರಾಯಷಃ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮಾಡಿದಂತ ದಾಖಲೆಗಳಿಗೂ ಕೂಡ ಸರಿಹೊಂದುವಂತೆ ಬರೆಯಲಾಗಿತ್ತೇನೋ. ಇಡೀ ಪ್ರಪಂಚವೇ ಚಾಪ್ಟರ್ 2ಗೆ ಕಾಯುವಂತೆ ಮಾಡಿತ್ತು ಮೊದಲಾರ್ಧ. ಆ ಎಲ್ಲ ನಿರೀಕ್ಷೆಗಳ ಉತ್ತರವಾಗಿ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಯಾಗಿದೆ. ಪ್ರಪಂಚದ ವಿವಿಧ ಕಡೆಗಳಲ್ಲಿ ಬಿಡುಗಡೆ ಕಂಡಿರುವ ಚಿತ್ರ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿದೆ. ಎಲ್ಲ ಕಡೆ ದಾಖಲೆ ಬರೆಯುತ್ತ ಪ್ರೇಕ್ಷಕರೆಲ್ಲರ ಮನಸೆಳೆಯುತ್ತಿದೆ.


ಪ್ರಶಾಂತ್ ನೀಲ್ ರಚಿಸಿ ನಿರ್ದೇಶಿಸಿರೋ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಮ್ಮ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಜೊತೆಗೆ, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನ ಟಂಡನ್ ಮುಂತಾದ ದೊಡ್ಡ ದೊಡ್ಡ ನಟರು ಬಣ್ಣ ಹಚ್ಚಿದ್ದಾರೆ. ‘ಹೊಂಬಾಳೆ ಫಿಲಂಸ್’ ಸಂಸ್ಥೆ ಬಂಡವಾಳ ಹೂಡಿದ್ದು ಸದ್ಯ ಚಿತ್ರತಂಡ ಸಿನಿಮಾದ ಯಶಸ್ಸಿನ ಸಂತಸದಲ್ಲಿ ತೇಲುತ್ತಿದೆ. ಬಿಡುಗಡೆಗೊಂಡು ಕೇವಲ ಒಂದೇ ಒಂದು ವಾರಾಂತ್ಯವನ್ನು ಕಂಡಿರುವ ಕೆಜಿಎಫ್ ನ ಎರಡನೇ ಅಧ್ಯಾಯ ಬರೋಬ್ಬರಿ 29 ಹೊಸ ದಾಖಲೆಗಳನ್ನು ಬರೆದಿದೆ. ಅಷ್ಟೇ ಅಲ್ಲದೇ, ಪ್ರಪಂಚದ ಲೆಕ್ಕದಲ್ಲಿ ಅತಿ ಹೆಚ್ಚು ವಾರಾಂತ್ಯದ ಕಲೆಕ್ಷನ್ ಪಡೆದ ಎರಡನೇ ಸಿನಿಮಾ ಎಂಬ ಖ್ಯಾತಿ ಪಡೆದಿದೆ ಚಿತ್ರ. ಸದ್ಯ ಮೊದಲ ಸ್ಥಾನದಲ್ಲಿ ಹಾಲಿವುಡ್ ನ “ಸ್ಪಯ್ಡರ್ ಮ್ಯಾನ್: ನೋ ವೇ ಹೋಂ” ಚಿತ್ರವಿದ್ದು, ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ವಿಚಾರವಾಗಿದೆ.


ಭಾರತ ಚಿತ್ರರಂಗದ ಪಂಚ ಪ್ರಮುಖ ಭಾಷೆಗಳಾದ, ಕನ್ನಡ, ತೆಲುಗು, ಹಿಂದಿ, ತಮಿಳು ಹಾಗು ಮಲಯಾಳಂ ನಲ್ಲಿ ಬಿಡುಗಡೆ ಕಂಡಿರೋ ಈ ಸಿನಿಮಾ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ದಾಖಲಿಸಿರೋ ಹೊಸ ದಾಖಲೆಗಳು ಈ ಕೆಳಗಿನಂತಿವೆ,




- ಹಿಂದಿಯಲ್ಲಿ ದಾಖಲೆಯ ಓಪನಿಂಗ್ ಕಲೆಕ್ಷನ್.
- ಹಿಂದಿಯಲ್ಲಿ ದಾಖಲೆಯ ವಾರಾಂತ್ಯದ ಕಲೆಕ್ಷನ್.
- ಅತಿ ಹೆಚ್ಚು ಮೊದಲನೇ ದಿನದ ಕಲೆಕ್ಷನ್(ಹಿಂದಿ)
- ಅತಿ ಹೆಚ್ಚು ಎರಡನೇ ದಿನದ ಕಲೆಕ್ಷನ್(ಹಿಂದಿ)
- ಅತಿ ಹೆಚ್ಚು ಭಾನುವಾರದ ಕಲೆಕ್ಷನ್(ಹಿಂದಿ)
- ಅತಿ ಹೆಚ್ಚು ನಾಲ್ಕು ದಿನದ ಕಲೆಕ್ಷನ್(ಹಿಂದಿ)
- ದಾಖಲೆಯ ಓಪನಿಂಗ್ ಕಲೆಕ್ಷನ್(ಕರ್ನಾಟಕ)
- ದಾಖಲೆಯ ವಾರಾಂತ್ಯದ ಕಲೆಕ್ಷನ್(ಕರ್ನಾಟಕ)
- ಅತಿ ಹೆಚ್ಚು ಮೊದಲನೇ ದಿನದ ಕಲೆಕ್ಷನ್(ಕರ್ನಾಟಕ)
- ಅತಿ ಹೆಚ್ಚು ಎರಡನೇ ದಿನದ ಕಲೆಕ್ಷನ್(ಕರ್ನಾಟಕ)
- ಅತಿ ಹೆಚ್ಚು ಭಾನುವಾರದ ಕಲೆಕ್ಷನ್(ಕರ್ನಾಟಕ)
- ಅತಿ ಹೆಚ್ಚು ನಾಲ್ಕು ದಿನದ ಕಲೆಕ್ಷನ್(ಕರ್ನಾಟಕ)
- ದಾಖಲೆಯ ಓಪನಿಂಗ್ ಕಲೆಕ್ಷನ್(ಕೇರಳ)
- ದಾಖಲೆಯ ವಾರಾಂತ್ಯದ ಕಲೆಕ್ಷನ್(ಕೇರಳ)
- ಅತಿ ಹೆಚ್ಚು ಮೊದಲನೇ ದಿನದ ಕಲೆಕ್ಷನ್(ಕೇರಳ)
- ಅತಿ ಹೆಚ್ಚು ಎರಡನೇ ದಿನದ ಕಲೆಕ್ಷನ್(ಕೇರಳ)
- ಅತಿ ಹೆಚ್ಚು ಭಾನುವಾರದ ಕಲೆಕ್ಷನ್(ಕೇರಳ)
- ಅತಿ ಹೆಚ್ಚು ನಾಲ್ಕು ದಿನದ ಕಲೆಕ್ಷನ್(ಕೇರಳ)
- ಅತಿ ಹೆಚ್ಚು ನಾಲ್ಕನೇ ದಿನದ ಕಲೆಕ್ಷನ್(ಕೇರಳ)
- ಅತಿ ಹೆಚ್ಚು ಮೂರನೇ ದಿನದ ಕಲೆಕ್ಷನ್(ಕೇರಳ)
- ಆಂಧ್ರ/ತೆಲಂಗಾಣದಲ್ಲಿ ದಾಖಲೆಯ ಓಪನಿಂಗ್ ಕಲೆಕ್ಷನ್ (non-tollywood)
- ಆಂಧ್ರ/ತೆಲಂಗಾಣದಲ್ಲಿ ದಾಖಲೆಯ ವಾರಾಂತ್ಯದ ಕಲೆಕ್ಷನ್(non-tollywood)
- ಆಂಧ್ರ/ತೆಲಂಗಾಣದಲ್ಲಿ ಅತಿ ಹೆಚ್ಚು ಮೊದಲನೇ ದಿನದ ಕಲೆಕ್ಷನ್(non-tollywood)
- ಆಂಧ್ರ/ತೆಲಂಗಾಣದಲ್ಲಿ ಅತಿ ಹೆಚ್ಚು ಎರಡನೇ ದಿನದ ಕಲೆಕ್ಷನ್(non-tollywood)
- ಆಂಧ್ರ/ತೆಲಂಗಾಣದಲ್ಲಿ ಅತಿ ಹೆಚ್ಚು ಭಾನುವಾರದ ಕಲೆಕ್ಷನ್(non-tollywood)
- ಆಂಧ್ರ/ತೆಲಂಗಾಣದಲ್ಲಿ ಅತಿ ಹೆಚ್ಚು ಮೂರನೇ ದಿನದ ಕಲೆಕ್ಷನ್(non-tollywood)
- ಆಂಧ್ರ/ತೆಲಂಗಾಣದಲ್ಲಿ ಅತಿ ಹೆಚ್ಚು ನಾಲ್ಕನೇ ದಿನದ ಕಲೆಕ್ಷನ್(non-tollywood)
- IMAXನಲ್ಲಿ ದಾಖಲೆಯ ವಾರಾಂತ್ಯದ ಕಲೆಕ್ಷನ್.
- ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರ.






