• July 6, 2023

KGF ಕ್ಲೈಮ್ಯಾಕ್ಸ್ ಗೂ #Salaar ಟೀಸರ್ ಗೂ ಲಿಂಕ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್..!

KGF ಕ್ಲೈಮ್ಯಾಕ್ಸ್ ಗೂ #Salaar ಟೀಸರ್ ಗೂ ಲಿಂಕ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್..!

KGF 2’ ಕ್ಲೈಮ್ಯಾಕ್ಸ್​ನಲ್ಲಿ ರಾಕಿ ಭಾಯ್ ಸಮುದ್ರಕ್ಕೆ ಬೀಳುತ್ತಾನೆ. ಆಗ ಸಮಯ ಮುಂಜಾನೆ 5 ಗಂಟೆ. ಇದೇ ರೀಸನ್ ಗೆ ‘ಸಲಾರ್’ ಟೀಸರ್ ಮುಂಜಾನೆ 5ಗಂಟೆಗೆ ರಿಲೀಸ್ ಆಗಿದೆ ಅಂತಾ ಅಭಿಪ್ರಾಯಪಟ್ಟಿದ್ದರು.

Salaar Movie‌ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದು ಪ್ರಶಾಂತ್ ನೀಲ್ ಯೂನಿವರ್ಸ್ ಎಂದು ಎಲ್ಲರೂ ಕರೆದಿದ್ದಾರೆ. ವಿಶೇಷ ಎಂದರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಟೀಸರ್​ನಲ್ಲಿ ಲಿಂಕ್ ನೀಡಲಾಗಿದೆ. ಇದನ್ನು ಗಮನಿಸಿದ ಅನೇಕರು ಶಾಕ್ ಆಗಿದ್ದಾರೆ.

‘ಸಲಾರ್’ ಟೀಂನವರು ಮುಂಜಾನೆ 5:12ಕ್ಕೆ ಟೀಸರ್ ಅನಾವರಣ ಮಾಡಿದ್ದರು. ಇದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು.
ಆದರೆ, ಆ ರೀತಿಯ ಯಾವುದೇ ಕನೆಕ್ಷನ್ ಕಂಡಿಲ್ಲ. ಆದರೆ, ‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್​’ಗೂ ಲಿಂಕ್ ಇರುವ ವಿಚಾರ ಗೊತ್ತಾಗಿದೆ.

‘ಕೆಜಿಎಫ್ 2’ ಸಿನಿಮಾದಲ್ಲಿ ಒಂದಷ್ಟು ಟ್ಯಾಂಕರ್​ಗಳು ಕಂಡಿದ್ದವು. ಆ ಪೈಕಿ ಒಂದು ಟ್ಯಾಂಕರ್ ಹೆಸರು ‘ಸಿ-516’. ‘ಸಲಾರ್’ ಸಿನಿಮಾದಲ್ಲೂ ಅದೇ ನಂಬರ್​ನ ಟ್ಯಾಂಕರ್ ಕಾಣಿಸಿದೆ. ಹೀಗಾಗಿ, ‘ಕೆಜಿಎಫ್ 2’ ಚಿತ್ರದ ಮುಂದುವರಿದ ಭಾಗದ ರೀತಿಯಲ್ಲಿ ‘ಸಲಾರ್’ ಸಿನಿಮಾ ಮೂಡಿಬರಲಿದೆ ಎಂದು ಅನೇಕರು ಭಾವಿಸಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್