• December 9, 2021

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ-ಫೋಟೋ ಹಂಚಿಕೊಂಡ ಕ್ಯಾಟ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ-ಫೋಟೋ ಹಂಚಿಕೊಂಡ ಕ್ಯಾಟ್

ಬಾಲಿವುಡ್ ನಟಿ ಕತ್ರಿನಾ ಕೈಫ್‌ ಹಾಗೂ ನಟ ವಿಕ್ಕಿ ಕೌಶಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ… ಇಂದು ರಾಜಸ್ಥಾನದ ಐಷಾರಾಮಿ ರೆಸಾರ್ಟ್‌ ನಲ್ಲಿ ಇಬ್ನರ ವಿವಾಹ ನಡೆದಿದ್ದು ,ಹಿಂದೂ ಸಂಪ್ರದಾಯದಂತೆ ಇಬ್ಬರು ಸಪ್ತಪದಿ ತುಳಿದಿದ್ದಾರೆ ..

ರಾಜಸ್ಥಾನದಲ್ಲಿ ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್‌ ಆಗಿ ಬದಲಾಗಿರುವ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರಾಯಲ್ ವೆಡ್ಡಿಂಗ್ ಜರುಗಿದೆ. ಮದುವೆಯ ಫೋಟೋಗಳು ಎಲ್ಲೂ ಲೀಕ್ ಆಗದಂತೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ತಂಡ ತೀವ್ರ ಎಚ್ಚರಿಕೆ ವಹಿಸಿದ್ದರು. ಸದ್ಯ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕತ್ರಿನಾ ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಮದುವೆಗೆ ಮದುವಣಗಿತ್ತಿ ಕತ್ರಿನಾ ಕೈಫ್ ಕೆಂಪು ಬಣ್ಣದ ಸಬ್ಯಸಾಚಿ ಡಿಸೈನರ್ ಲೆಹಂಗಾ ತೊಟ್ಟು ರಾಣಿಯಂತೆ ಕಂಗೊಳಿಸುತ್ತಿದ್ದರು. ಇನ್ನೂ ವರ ವಿಕ್ಕಿ ಕೌಶಲ್ ಐವೆರಿ ಹಾಗೂ ಗೋಲ್ಡ್ ಬಣ್ಣದ ಶೇರ್ವಾನಿ ತೊಟ್ಟು ರಾಜನಂತೆ ಮಿಂಚಿದ್ದರು.