• March 15, 2022

ಮತ್ತೆ ಜೀರೋ ಸೈಜ್ ಗೆ ಮರಳಿದ ಬೆಬೋ ಹೇಳಿದ್ದೇನು ಗೊತ್ತಾ?

ಮತ್ತೆ ಜೀರೋ ಸೈಜ್ ಗೆ ಮರಳಿದ ಬೆಬೋ ಹೇಳಿದ್ದೇನು ಗೊತ್ತಾ?

ಹುಡುಗಿಯರಿಗೆ ತೂಕದ ವಿಷಯದಲ್ಲಿ ಮಾದರಿಯಾದವರು ಕರೀನಾ ಕಪೂರ್. ಜೀರೋ ಸೈಜ್ ಇದ್ದ ಕರೀನಾ ಗರ್ಭಿಣಿಯಾಗಿದ್ದಾಗ 16 ಸೈಜ್ ಗೆ ಏರಿದ್ದರು. ಈಗ ಪುನಃ ತೂಕ ಇಳಿಸಿಕೊಂಡು ಜೀರೋ ಸೈಜ್ ಗೆ ಮರಳುತ್ತಿದ್ದಾರೆ. ತೂಕ ಇಳಿಸಲು ಯೋಗ, ವರ್ಕೌಟ್ ಮೊರೆ ಹೋಗಿರುವ ಕರೀನಾ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಹಂಚಿಕೊಳ್ಳುತ್ತಿದ್ದರು. ಈಗ ತೂಕ ಕಳೆದುಕೊಂಡಿರುವ ಬೆಬೋ ಲೇಟೆಸ್ಟ್ ಫೊಟೋ ಹಂಚಿಕೊಂಡಿದ್ದಾರೆ.

“ನಾನು ಜೀರೋ ಸೈಜ್ ನಿಂದ 16 ಸೈಜ್ ಗೆ ಏರಿದ್ದೆ. ಜೀವನದ ಎಲ್ಲ ಹಂತಗಳನ್ನು ಇಷ್ಟ ಪಟ್ಟಿದ್ದೇನೆ. ಗರ್ಭಿಣಿಯಾಗಿದ್ದಾಗ 25 ಕೆಜಿ ತೂಕ ದಪ್ಪಗಾದೆ. ಇಷ್ಟಪಡುವ ಕೆಲಸ ಮಾಡದೇ ಇರಲಿಲ್ಲ. 8 ತಿಂಗಳ ಗರ್ಭಿಣಿ ಆಗಿದ್ದಾಗ ಫೋಟೋ ಶೂಟ್ ಮಾಡಿಸಿಕೊಂಡೆ. ಇದು ನನಗೆ ಖುಷಿ ನೀಡಿತು. ಈ ಬರಹ ಓದುತ್ತಿರುವ ಹುಡುಗೀಯರಿಗೆ ಇದು ನಿಮ್ಮ ಜೀವನ, ನಿಮ್ಮ ಆಯ್ಕೆ ಎಂದು ಹೇಳಲು ಬಯಸುತ್ತೇನೆ” ಎಂದಿದ್ದಾರೆ.

ಸದ್ಯ ಮಕ್ಕಳಾದ ತೈಮೂರ್ ಅಲಿ ಖಾನ್ ಹಾಗೂ ಜೆಹ್ ಅಲಿ ಖಾನ್ ರ ಆರೈಕೆಯಲ್ಲಿ ಬ್ಯುಸಿ ಆಗಿರುವ ಕರೀನಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಇನ್ನು ಗರ್ಭಾವಸ್ಥೆಯ ತೊಳಲಾಟದ ಬಗ್ಗೆ “ಪ್ರೆಗ್ನೆನ್ಸಿ ಬೈಬಲ್” ಪುಸ್ತಕ ಬರೆದಿದ್ದಾರೆ.