• October 12, 2021

ಪಶ್ಚಿಮ ಘಟ್ಟದ ಭೂಗತ ಲೋಕವನ್ನಾಧರಿಸಿದ ಬರೆದ “ಕಾರ್ಗಲ್ ನೈಟ್ಸ್” ಚಿತ್ರದ ಟ್ರೇಲರ್ ಗೆ ಸಕ್ಕತ್ ರೆಸ್ಪಾನ್ಸ್

ಪಶ್ಚಿಮ ಘಟ್ಟದ ಭೂಗತ ಲೋಕವನ್ನಾಧರಿಸಿದ ಬರೆದ “ಕಾರ್ಗಲ್ ನೈಟ್ಸ್” ಚಿತ್ರದ ಟ್ರೇಲರ್ ಗೆ ಸಕ್ಕತ್ ರೆಸ್ಪಾನ್ಸ್

ಒಂದು ಹೊಸ ಚಿತ್ರ ತಂಡ, ವಿಭಿನ್ನವಾದ ಕಾನ್ಸೆಪ್ಟ್ , ಜೊತೆಗೆ ಒಂದು ವಿನೂತನ ಪ್ತಯತ್ನವನ್ನ “ಕಾರ್ಗಲ್ ನೈಟ್ಸ್” ಎನ್ನುವ ಚಿತ್ರದ ಮೂಲಕ ತೆರೆಯ ಮೇಲೆ ತರುತ್ತಿದ್ದಾರೆ ಅರುಣ್ ಎ ಎನ್ ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ. ಹೌದು ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ ಚಿತ್ರಿಸಿರುವ ಈ ಚಿತ್ರ ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು ಇಂದು ಇದರ ಟ್ರೈಲರ್ A2 music YouTube ಚಾನಲ್ ನಲ್ಲಿ ಬಿಡುಗಡೆ ಮಾಡಲಾಯಿತು.

90 ರ ದಶಕದ ಕಾಲದ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಅದ್ಭುತವಾಗಿ ಮರುಸೃಷ್ಟಿಸಿದ್ದು, ಪಶ್ಚಿಮ ಘಟ್ಟದ ಭೂಗತ ಲೋಕವನ್ನು ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. ಇನ್ನೂ
ಈ ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು, ಸುರೇಂದ್ರನಾಥ್ ಬಿ ಆರ್ ಸಂಗೀತವನ್ನು ರಚಿಸಿದ್ದಾರೆ. ಹಾಗೆಯೇ ಈ ಚಿತ್ರದ ಇನ್ನೊಂದು ವಿಶೇಷತೆ ಅಂದರೆ ಚಿತ್ರದ ಕತೆಯನ್ನು ಸಾಗರ ತಾಲ್ಲೂಕು ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ.

ಇನ್ನೂ ಯುವ ನಟ ಹರ್ಶಿಲ್ ಕೌಶಿಕ್ ಈ ಚಿತ್ರದ ಮುಖ್ಯ ಪಾತ್ರದಾರಿಯಗಿದ್ದು ನಾಯಕ ನಟನಾಗಿ ನಟಿಸುತ್ತಿದಾರೆ. ಇವರ ಜೊತೆಗೆ ರಾಗ್ ಯು ಆರ್ ಎಸ್ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಸೂಚನ್ ಶೆಟ್ಟಿ, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಈ ಚಿತ್ರದಲ್ಲಿ ತಮ್ಮ ವಿಭಿನ್ನವಾದ ಪಾತ್ರದ ಮೂಲಕ ಚಿತ್ರಕ್ಕೆ ಇನ್ನಷ್ಟೂ ಕಳೆ ತುಂಬಿದ್ದಾರೆ.