• April 21, 2022

ಕಿರುತೆರೆ ವೀಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ..

ಕಿರುತೆರೆ ವೀಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ..

ಹಿಂದಿ, ತೆಲುಗು ಕಿರುತೆರೆಯ ಹಲವು ಧಾರಾವಾಹಿಗಳು ಕನ್ನಡ ಭಾಷೆಗೆ ಡಬ್ ಆಗುತ್ತಿರುವುದು ಹಳೆಯ ವಿಚಾರ. ಆದರೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯೊಂದು ಇದೀಗ ಕನ್ನಡ ಭಾಷೆಗೆ ಡಬ್ ಆಗುತ್ತಿದೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯು ಹಿಂದಿ ಭಾಷೆಗೆ ಡಬ್ ಆಗಲಿದೆ.

ಹಿಂದಿಯ ಜನಪ್ರಿಯ ವಾಹಿನಿ ಜಿಇಸಿಯಲ್ಲಿ ‘ಕನ್ನಡತಿ ಧಾರಾವಾಹಿಯ ಡಬ್ಡ್ ವರ್ಷನ್ ಪ್ರಸಾರ ಕಾಣಲಿದೆ. ‘ಅಜ್ನಬಿ ಬನೇ ಹಮ್ಸಫರ್’ ಹೆಸರಿನಲ್ಲಿ ಕನ್ನಡತಿ ಧಾರಾವಾಹಿ ಹಿಂದಿಯಲ್ಲಿ ಪ್ರಸಾರವಾಗಲಿದ್ದು, ಧಾರಾವಾಹಿಯ ಪ್ರೋಮೋ ಕೂಡಾ ಬಿಡುಗಡೆಯಾಗಿದೆ.

ನಟ ಕಿರಣ್ ರಾಜ್ ಅವರು ಹಿಂದಿ ವರ್ಷನ್ ನ ಪ್ರೋಮೋವನ್ನು ತಮ್ಮ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಇದರ ಜೊತೆಗೆ ಕಮೆಂಟ್ ಗಳ ಮಹಾಪೂರವೇ ಹರಿದುಬರುತ್ತಿದೆ.

ಕನ್ನಡ ಕಿರುತೆರೆಯಲ್ಲಿ ಹೊಸ ಮೈಲಿಗಲನ್ನು ಸೃಷ್ಟಿ ಮಾಡಿರುವ ಕನ್ನಡತಿ ಧಾರಾವಾಹಿಯು ಮರಾಠಿಗೆ ರೀಮೇಕ್ ಆಗಿದೆ. ಕಲರ್ಸ್ ಮರಾಠಿ ವಾಹಿನಿಯಲ್ಲಿ ‘ಭಾಗ್ಯ ದಿಲೆ ತು ಮಲಾ’ ಧಾರಾವಾಹಿ ಪ್ರಸಾರವಾಗುತ್ತಿದ್ದು ತನ್ವಿ ಪ್ರಕಾಶ್, ವಿವೇಕ್ ರಮೇಶ್, ನಿವೇದಿತಾ ಜೋಶಿ ಸರಫ್ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.