• December 4, 2021

ಹಿರಿಯ ನಟ ಶಿವರಾಮ್ ಇನ್ನಿಲ್ಲ

ಹಿರಿಯ ನಟ ಶಿವರಾಮ್ ಇನ್ನಿಲ್ಲ

ಹಿರಿಯ ನಟ‌ಶಿವರಾಮ್ ಇನ್ನಿಲ್ಲ…84ವರ್ಷ ವಯಸ್ಸಾಗಿದ್ದ ಶಿವರಾಮ್ 28 ಜನವರಿ 1938 ರಲ್ಲಿ‌ ಜನಿಸಿದ್ರು …ಶಿವರಾಮ್ ಅಥವಾ ಶಿವರಾಮಾಣ್ಣ ಎಂದು ಜನಪ್ರಿಯ ಗಳಿಸಿದ್ರು…

ಆರು ದಶಕಗಳಿಂದ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಭಾರತೀಯ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ರು…ಕನ್ನಡ ಸಿನಿಮಾಗಳಲ್ಲಿ ನಾಯಕನಾಗಿ ಪೋಷಕ ಪಾತ್ರಗಳಲ್ಲಿ ಹಾಗೂ ಹಾಸ್ಯ ಪಾತ್ರಗಳಲ್ಲಿ ಶಿವರಾಂ ನಟಿಸಿದ್ದರು ..

ಶಿವರಾಮ್ ಹಾಗೂ ಅವರ ಸಹೋದರರು ಸೇರಿ ರಾಶಿ ಪ್ರದರ್ಶನ ಬ್ಯಾನರಡಿಯಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು ..ಡಾಕ್ಟರ್ ರಾಜ್ ಕುಮಾರ್ ಸೇರಿದಂತೆ ರಜನಿಕಾಂತ್ ಅಮಿತಾಭ್ ಬಚ್ಚನ್ ಕಮಲ್ ಹಾಸನ್ ಹೀಗೆ ಪ್ರಖ್ಯಾತ ನಟರ ಸಿನಿಮಾಗಳನ್ನು ಶಿವರಾಮ್ ಅವರು ನಿರ್ಮಾಣ ಮಾಡಿದ್ದರು …

ರಂಗಭೂಮಿಯಲ್ಲಿ ನಾಟಕ ಪ್ರದರ್ಶನ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶಿವರಾಂ ಅವರು ಬೆರೆತ ಜೀವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು …ಕೆಎಸ್ಎಲ್ ಸ್ವಾಮೀ ಗೀತಪ್ರಿಯ ಸಂಗೀತಂ ಶ್ರೀನಿವಾಸ್ ಪುಟ್ಟಣ್ಣ ಕಣಗಾಲ್ ಇನ್ನೂ ಅನೇಕರ ಜೊತೆಯಲ್ಲಿ ಸಹನಿರ್ದೇಶಕರಾಗಿ ಶಿವರಾಂ ಕೆಲಸ ಮಾಡಿದ್ದಾರೆ …