• February 16, 2022

ನಾಡೋಜ ಚನ್ನವೀರ ಕಣವಿ ಇನ್ನಿಲ್ಲ !

ನಾಡೋಜ ಚನ್ನವೀರ ಕಣವಿ ಇನ್ನಿಲ್ಲ !

ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಾಡೋಜ ಚನ್ನವೀರ ಕಣವಿ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ…

ಚನ್ನವೀರ ಕಣವಿ ಕನ್ನಡದ ಸಮನ್ವಯ ಕವಿ.. ಸುನೀತಗಳ ಸಾಮ್ರಾಟ್ ಎಂದೇ ಪ್ರಸಿದ್ಧರಾಗಿದ್ದರು… ಕನ್ನಡದ ಖ್ಯಾತ ವಿದ್ವಾಂಸ ಹಾಗೂ ಹೊಸಗನ್ನಡ ಕಾವ್ಯದಲ್ಲಿ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು….

ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಜನಿಸಿದರು…ತಂದೆ ಸಕ್ಕರೆಪ್ಪ ತಾಯಿ ಪಾರ್ವತವ್ವ…ತಂದೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.. ಧಾರವಾಡದಲ್ಲಿ ಪ್ರಾಥಮಿಕ ಮಾಧ್ಯಮ ಹಾಗೂ ಕಾಲೇಜು ಶಿಕ್ಷಣ ಪೂರೈಸಿದ ಕಣವಿಯವರು ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಎಂಎ ಪಡೆದರು ನಂತರ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು…

ಕಣವಿ ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು ಇದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ