- January 31, 2022
ಸ್ಯಾಂಡಲ್ವುಡ್ ಗೆ ಸಿಕ್ಕ ಮತ್ತೊರ್ವ ಭರವಸೆಯ ನಾಯಕ


ಚಂದನವನಕ್ಕೆ ದಿನಕ್ಕೆ ನೂರಾರು ಕಲಾವಿದರು ಎಂಟ್ರಿ ಕೊಡ್ತಾರೆ ಕೆಲವ್ರು ಇಲ್ಲೇ ಉಳಿದುಕೊಂಡ್ರೆ ಕೆಲವ್ರು ಸದ್ದಿಲ್ಲದೆ ಕಳೆದು ಹೋಗ್ತಾರೆ…ಸದ್ಯ ದಕ್ಷ್ ಎಂಬ ಸ್ಪುರದ್ರೂಪಿ ನಟ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.


ಗದಗ ಮೂಲದ ದಕ್ಷ್ ‘ನೇತ್ರಂ’ ಚಿತ್ರದ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಹೊಸ ಹುಡುಗನಿಗೆ ಸಿನಿಪ್ರಿಯರು ಸ್ವಾಗತ ಕೋರಿದ್ದಾರೆ. ಇತ್ತೀಚೆಗೆ ‘ನೇತ್ರಂ’ ಟೀಸರ್ ಕೂಡಾ ಬಿಡುಗಡೆಯಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ರೌಡಿಗಳ ಬಳಿ ಸಿಲುಕಿರುವ ನಾಯಕಿಯನ್ನು ಕಾಪಾಡಲು ಹೀರೋ ಎಂಟ್ರಿ ಕೊಡುವ ದೃಶ್ಯಗಳನ್ನು ಈ ಟೀಸರ್ನಲ್ಲಿ ತೋರಿಸಲಾಗಿದೆ. ಈ ಟೀಸರ್ ನಲ್ಲಿರುವ ಸಂಭಾಷಣೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.


‘ನೇತ್ರಂ’ ಸಿನಿಮಾ ಕನ್ನಡ-ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿದ್ದು ಜಯಸೂರ್ಯ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೊಕ್ತುಮ್ ಪಟೇಲ್ , ಶಾಯಿಕ್ ಶಬೀರ್ ಅಬ್ಬು ಹಾಗೂ ಬಿಳ್ಳೂರ್ ಸುರೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಬಿಳ್ಳೂರು ಸುರೇಶ್, ‘ನೇತ್ರಂ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದಕ್ಷ್ ಜೊತೆಗೆ ಶೀಲಾ, ತೇಜಸ್ವಿನಿ, ಧನಶ್ರೀ, ಮುದಾಸೀರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ವೆಂಕಟೇಶ್ ಯುಡಿವಿ ಸಂಕಲನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚೈತನ್ಯ ರಾಜ ಸಂಗೀತ ನೀಡಿದ್ದಾರೆ…


ಕನ್ನಡ, ತೆಲುಗು, ತಮಿಳು ಸೇರಿದಂತೆ 500 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಫೈಟ್ ಮಾಸ್ಟರ್ ಕುಂಫ್ಫು ಚಂದ್ರು ಈ ಚಿತ್ರಕ್ಕೆ ಸ್ಟಂಟ್ ಕೊರಿಯೋಗ್ರಫಿ ಮಾಡಿರುವುದು ಸಿನಿಮಾದ ಪ್ಲಸ್ ಪಾಯಿಂಟ್ ಎನ್ನಲಾಗಿದೆ.




