- June 8, 2022
ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರು ನೀಡಿದ ಕಮಲ್ ಹಾಸನ್


ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂಗಳಿಗೂ ಅಧಿಕ ಆದಾಯ ಗಳಿಸಿರುವ ವಿಕ್ರಮ್ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಗಳಿಸಿದ್ದು ಬರೋಬ್ಬರಿ 175 ಕೋಟಿ ರೂಪಾಯಿ.


ವಿಕ್ರಮ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಒಂದು ಅಭೂತಪೂರ್ವ ಮೈಲಿಗಲ್ಲನ್ನೇ ಸೃಷ್ಟಿ ಮಾಡಿದೆ. ಹೌದು, ಇಲ್ಲಿಯ ತನಕ ಕಮಲ್ ಹಾಸನ್ ಅಭಿನಯದ ಯಾವ ಸಿನಿಮಾವೂ ಇಷ್ಟೊಂದು ದಾಖಲೆ ಸೃಷ್ಟಿ ಮಾಡಿದ್ದೇ ಇಲ್ಲ. ಇನ್ನು ಕಮಲ್ ಹಾಸನ್ ಅವರ ಪಾಲಿಗೆ ವಿಕ್ರಮ್ ಸಿನಿಮಾ ಸ್ಪೆಷಲ್ ಹೌದು. ಯಾಕೆಂದರೆ ಇದರಲ್ಲಿ ಅವರು ಕೇವಲ ನಟರಾಗಿ ಮಾತ್ರರಲ್ಲದೇ ನಿರ್ಮಾಪಕರಾಗಿಯೂ ಕಾಣಿಸಿಕೊಂಡಿದ್ದಾರೆ.




ವಿಕ್ರಮ್ ಸಿನಿಮಾ ಗೆದ್ದ ಸಂತಸದಲ್ಲಿರುವ ಕಮಲ್ ಹಾಸನ್ ಅವರು ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಮಲ್ ಹಾಸನ್ ಅವರು ಲೋಕೇಶ್ ಅವರಿಗೆ 60 ಲಕ್ಷಕ್ಕೂ ಅಧಿಕ ಮೌಲ್ಯದ ಲೆಕ್ಸಾಸ್ ಕಾರು ಉಡುಗೊರೆ ನೀಡಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಕಮಲ್ ಹಾಸನ್ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದು ಲೋಕೇಶ್ ಕನಗರಾಜ್ ಅದನ್ನು ಟ್ವಿಟ್ಟರ್ ನಲ್ಲೊ ಹಂಚಿಕೊಂಡಿದ್ದಾರೆ.






