• March 25, 2022

ಟಾಲಿವುಡ್ ಅಂಗಳದಲ್ಲಿ ದಾಖಲೆ ಸೃಷ್ಟಿ ಮಾಡಿದ ಕಲಾವತಿ

ಟಾಲಿವುಡ್ ಅಂಗಳದಲ್ಲಿ ದಾಖಲೆ ಸೃಷ್ಟಿ ಮಾಡಿದ ಕಲಾವತಿ

ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ಸರ್ಕಾರಿ ವಾರಿ ಪಾಟ ಚಿತ್ರದ ಕಲಾವತಿ ಹಾಡು ಟಾಲಿವುಡ್ ನಲ್ಲಿ ಹೊಸದಾಗಿರುವ ಹವಾ ಎಬ್ಬಿಸಿತ್ತು. ಪ್ರೇಮಿಗಳ ದಿನ ರಿಲೀಸ್ ಆದ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಮತ್ತೊಂದು ದಾಖಲೆ ಬರೆದಿದೆ.

ಸಂಗೀತ ನಿರ್ದೇಶಕ ಎಸ್ ತಮನ್ ಅವರ ಮ್ಯೂಸಿಕ್ ನಲ್ಲಿ ಮೂಡಿರುವ ಈ ಹಾಡು ರಿಲೀಸ್ ಆದ 36 ದಿನಗಳಲ್ಲಿ ಹೊಸ ದಾಖಲೆ ಬರೆದಿದೆ. ಸರ್ಕಾರಿ ವಾರಿ ಪಾಟ ಚಿತ್ರದ ಎರಡು ಹಾಡುಗಳು ರಿಲೀಸ್ ಈಗಾಗಲೇ ಆಗಿದ್ದು ಇದರಲ್ಲಿ ಮೊದಲನೇ ಹಾಡು ಕಲಾವತಿ. ಈ ಹಾಡು ರಿಲೀಸ್ ಆದ 36 ದಿನಗಳಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸಂತಸದ ಸುದ್ದಿಯನ್ನು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ.

ಈ ಸುಂದರ ಹಾಡನ್ನು ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ತಮನ್ ಹಾಗೂ ಸಿದ್ ಶ್ರೀರಾಮ್ ಇಬ್ಬರ ಕಾಂಬಿನೇಷನ್ ನಲ್ಲಿ ಈ ಹಿಂದೆ ಅಲಾವೈಕುಂಟಪುರಮುಲೋ ಚಿತ್ರದ ಸಾಮಜವರಗಮನಾ ಹಾಡು ಕೂಡಾ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಇದೇ ಜೋಡಿಯ ಈ ಹಾಡು ಕೂಡಾ ಕಡಿಮೆ ಸಮಯದಲ್ಲಿ ದಾಖಲೆ ನಿರ್ಮಿಸಿದೆ.