• January 3, 2022

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್ ಅಗರ್ವಾಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್ ಅಗರ್ವಾಲ್

ಟಾಲಿವುಡ್. ಕಾಲಿವುಡ್ ನಲ್ಲಿ ಪ್ರಖ್ಯಾತಿ ಗಳಿಸಿರುವ ನಟಿ ಕಾಜಲ್ ಅಗರ್ವಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ… ಹೌದು ಇತ್ತೀಚೆಗಷ್ಟೇ ಗೌತಮ್ ಜತೆ ಸಪ್ತಪದಿ ತುಳಿದಿದ್ದ ನಟಿ ಕಾಜಲ್ ಈಗ ತಾಯಿಯಾಗುತ್ತಿದ್ದಾರೆ

..

ಹೊಸ ವರ್ಷದಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರುವುದರ ಜೊತೆಗೆ ಕಾಜಲ್ ಫೋಟೋವನ್ನು ಶೇರ್ ಮಾಡಿ ಅದರ ಜೊತೆಗೆ ಗರ್ಭಿಣಿಯಾಗಿರುವಂತೆ ಇಮೋಜಿ ಕೂಡ ಶೇರ್ ಮಾಡಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ…

ಸದ್ಯ ಕಾಜಲ್ ಅಗರವಾಲ್ ಅಭಿನಯದ ಆಚಾರ್ಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕಾಜಲ್ ತೆರೆ ಹಂಚಿಕೊಂಡಿದ್ದಾರೆ …ಒಟ್ಟಾರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ಸಿಹಿ ಸುದ್ದಿ ಕೊಟ್ಟಿರುವುದು ಕಾಜಲ್ ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ ..